ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ತ್ಯಾಗಯ್ಯ – ನಾಗಯ್ಯ

ಕರ್ನಾಟಕ ಶಾಸ್ತ್ರೀಯ ಸಂಗೀತ ರೂಪಿಸಿದ ತ್ಯಾಗರಾಜರ ಕುರಿತ ‘ತ್ಯಾಗಯ್ಯ’ (1946) ತೆಲುಗು ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಚಿತ್ತೂರು ವಿ. ನಾಗಯ್ಯ. ಇದು ಅವರೇ ನಿರ್ಮಿಸಿ – ನಿರ್ದೇಶಿಸಿದ ಸಿನಿಮಾ. ಬಹುಭಾ‍ಷಾ ನಟ ನಾಗಯ್ಯ ನಿರ್ದೇಶಕ, ನಿರ್ಮಾಪಕ, ಸಂಗೀತ ಸಂಯೋಜಕ, ಚಿತ್ರಸಾಹಿತಿ, ಗಾಯಕರೂ ಹೌದು. ತೆಲುಗು ಮೂಲದ ಸಂತರಾದ ಪೋತನ, ವೇಮನ, ರಾಮದಾಸು ಪಾತ್ರಗಳಲ್ಲಿ ನಾಗಯ್ಯ (28/03/1904 – 30/12/1973) ಅಭಿನಯಿಸಿದ್ದಾರೆ. ಇಂದು ಅವರ ಜನ್ಮದಿನ.

Share this post