ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್ ನಾಗ್. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ ಶಂಕರ್‌ನಾಗ್ ಪ್ರಯೋಗಶೀಲ ನಿರ್ದೇಶಕರೆಂದು ಗುರುತಿಸಲ್ಪಡುತ್ತಾರೆ. ಅವರು ನಿರ್ದೇಶಿಸಿದ ‘ಮಾಲ್ಗುಡಿ ಡೇಸ್’ ಶ್ರೇಷ್ಠ ಹಿಂದಿ ಸರಣಿಗಳಲ್ಲೊಂದು. ರಂಗಭೂಮಿ ಹಿನ್ನೆಲೆಯ ನಟ, ನಿರ್ದೇಶಕ ಶಂಕರ್‌ನಾಗ್ ತಮ್ಮ ಪಾದರಸದಂತಹ ವ್ಯಕ್ತಿತ್ವದಿಂದ ಯುವ ಮನಸ್ಸುಗಳಿಗೆ ಮಾದರಿಯಾಗಿದ್ದವರು. 36ರ ಹರೆಯದಲ್ಲಿ ಅಕಾಲಿಕವಾಗಿ ಅವರು ಅಗಲಿದ್ದು ಕನ್ನಡ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ. ಇಂದು ಶಂಕರ್‌ನಾಗ್ (09/11/1954 – 30/09/1990) ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಒಂದಾನೊಂದು ಕಾಲದಲ್ಲಿ
- ಕನ್ನಡ ಸಿನಿಮಾ
Share this post