ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕೋಕಿಲ ಮೋಹನ್‌ – 65

ಖ್ಯಾತ ರಂಗಕರ್ಮಿ – ಚಿತ್ರನಿರ್ದೇಶಕ ಬಿ.ವಿ.ಕಾರಂತ, ನಟ ಕೋಕಿಲ ಮೋಹನ್‌, ಚಿತ್ರನಿರ್ದೇಶಕ ಟಿ.ಎಸ್‌.ರಂಗ, ನಟ ಸುಂದರ್‌ರಾಜ್‌. ಬೆಂಗಳೂರು ಜಯನಗರದಲ್ಲಿ ಬಿ.ವಿ.ಕಾರಂತರ ಮನೆಯ ಬಳಿ ಸೆರೆಯಾದ ಅಪರೂಪದ ಫೋಟೊ. ಕಾರಂತರ ಗರಡಿಯಲ್ಲಿ ರೂಪುಗೊಂಡ ಕನ್ನಡ ನಟ ಮೋಹನ್‌ ‘ಕೋಕಿಲ’ (1977) ಕನ್ನಡ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದರು. ‘ಮೂಡು ಪನಿ’ (1980) ತಮಿಳು ಸಿನಿಮಾದ ದೊಡ್ಡ ಯಶಸ್ಸು ಕಾಲಿವುಡ್‌ನಲ್ಲಿ ಅವರಿಗೆ ಭದ್ರ ಸ್ಥಾನ ಕಲ್ಪಿಸಿತು. ಅಲ್ಲಿಂದ ಮುಂದೆ ತಮಿಳು ಚಿತ್ರರಂಗದ ಜನಪ್ರಿಯ ನಾಯಕನಟರೊಬ್ಬರಾಗಿ ಕೋಕಿಲ ಮೋಹನ್ ಗುರುತಿಸಿಕೊಂಡರು. 80ರ ದಶಕದಲ್ಲಿ ಅವರು ‘ಸಿಲ್ವರ್ ಜ್ಯೂಬಿಲಿ ಹೀರೋ’ ಎಂದೇ ಕರೆಸಿಕೊಂಡಿದ್ದರು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು