ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಚಿತ್ರನಿರ್ದೇಶಕ ವಿ.ಸೋಮಶೇಖರ್

ಕನ್ನಡ ಸಿನಿಮಾ ಚಿತ್ರೀಕರಣವೊಂದರಲ್ಲಿ ನಿರ್ದೇಶಕ ವಿ.ಸೋಮಶೇಖರ್‌, ನಟ ವಿಷ್ಣುವರ್ಧನ್‌, ನಿರ್ದೇಶಕ ವಿಜಯಾರೆಡ್ಡಿ. ಎಪ್ಪತ್ತರ ದಶಕದ ಜನಪ್ರಿಯ ಕನ್ನಡ ಚಿತ್ರನಿರ್ದೇಶಕ ವಿ.ಸೋಮಶೇಖರ್. ನಿರ್ದೇಶಕರಾದ ರವೀ, ವೈ.ಆರ್.ಸ್ವಾಮಿ, ಆರ್.ರಾಮಮೂರ್ತಿ ಅವರಿಗೆ ಸಹಾಯಕರಾಗಿ ದುಡಿದ ಸೋಮಶೇಖರ್ `ಬಂಗಾರದ ಪಂಜರ’ ಚಿತ್ರದೊಂದಿಗೆ ಸ್ವತಂತ್ರ ನಿರ್ದೇಶಕರಾದರು. ಮುಂದೆ ರಾಜಕುಮಾರ್ ನಟನೆಯ `ಪ್ರೇಮದ ಕಾಣಿಕೆ’, `ಶಂಕರ್ ಗುರು’ ಚಿತ್ರಗಳು ಹೆಸರು ತಂದುಕೊಟ್ಟವು. ಮೂವತ್ತೈದಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸೋಮಶೇಖರ್ ಅವರಿಗೆ 1999-2000 ಸಾಲಿನ ರಾಜ್ಯ ಸರ್ಕಾರದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಸಂದಿದೆ. ಇಂದು ಸೋಮಶೇಖರ್ (27/07/1937 – 22/08/2003) ಅವರ ಸಂಸ್ಮರಣಾ ದಿನ. (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

Share this post