ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಾಹಿತಿ ಅನಂತಮೂರ್ತಿ ನೆನಪು

`ಸಂಸ್ಕಾರ’ ಚಿತ್ರೀಕರಣ ಸಂದರ್ಭದ (1968) ಅಪರೂಪದ ಫೋಟೋ. `ಸಂಸ್ಕಾರ’ ಚಿತ್ರದ ಸಹಾಯಕ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್, ಚಿತ್ರದ ಛಾಯಾಗ್ರಾಹಕ ಆಸ್ಟ್ರೇಲಿಯಾ ಮೂಲದ ಟಾಮ್ ಕೋವನ್, ಸಾಹಿತಿ ಡಾ.ಯು.ಆರ್.ಅನಂತಮೂರ್ತಿ, `ಸಂಸ್ಕಾರ’ದಲ್ಲಿ ಪ್ರಾಣೇಶಾಚಾರ್ಯ ಪಾತ್ರ ಮಾಡಿದ್ದ ಸಾಹಿತಿ ಗಿರೀಶ್ ಕಾರ್ನಾಡ್. ಕೆಳಗಡೆ ಕುಳಿತವರು – `ಸಂಸ್ಕಾರ’ ಚಿತ್ರದಲ್ಲಿ ಚಂದ್ರಿ ಪಾತ್ರ ನಿರ್ವಹಿಸಿದ್ದ ಸ್ನೇಹಲತಾ ರೆಡ್ಡಿ, ನಿರ್ದೇಶಕ ಪಟ್ಟಾಭಿರಾಮರೆಡ್ಡಿ, ಸಹಾಯಕ ನಿರ್ದೇಶಕ ಕಾನಕಾನಹಳ್ಳಿ ಗೋಪಿ, ಚಿತ್ರಕ್ಕೆ ಕಲಾನಿರ್ದೇಶನ ಮಾಡಿದ್ದ ಚಿತ್ರಕಲಾವಿದ ಎಸ್.ಜಿ.ವಾಸುದೇವ್. ಸಾಹಿತಿ ಯು.ಆರ್‌.ಅನಂತಮೂರ್ತಿ ಅವರ ಕೃತಿಯನ್ನು ಆಧರಿಸಿ ತಯಾರಾದ ‘ಸಂಸ್ಕಾರ’ ಭಾರತೀಯ ಹೊಸ ಅಲೆಯ ಚಿತ್ರಗಳ ಸಂದರ್ಭದಲ್ಲೇ ಪ್ರಮುಖ ಸಿನಿಮಾ. ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ (21/12/1932 – 22/08/2014) ಅವರು ಅಗಲಿದ ದಿನವಿದು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು