ಹಿಂದಿ ಸಿನಿಮಾದ ವಾಡಿಯಾ ಸಹೋದರರು – ಜಮ್‌ಶೆಡ್ ಬೊಮನ್ ವಾಡಿಯಾ ಮತ್ತು ಹೋಮಿ ವಾಡಿಯಾ. ಇವರು ಜೊತೆಗೂಡಿ 1933ರಲ್ಲಿ ವಾಡಿಯಾ ಮೂವೀಟೋನ್ ಸ್ಟುಡಿಯೋ ಆರಂಭಿಸಿದರು. ಅವರ ಚಿತ್ರನಿರ್ಮಾಣ ಸಂಸ್ಥೆಯಡಿ ಪೌರಾಣಿಕ, ಫ್ಯಾಂಟಸಿ ಮತ್ತು ಸ್ಟಂಟ್ ಹಿಂದಿ ಸಿನಿಮಾಗಳು ತಯಾರಾಗಿವೆ. ನಟಿ ಫಿಯರ್‌ಲೆಸ್ ನಾಡಿಯಾ ಅವರನ್ನು ಬೆಳ್ಳಿತೆರೆಯಲ್ಲಿ ಜನಪ್ರಿಯಗೊಳಿಸಿದ್ದೇ ವಾಡಿಯಾ ಸಂಸ್ಥೆಯ ಸಿನಿಮಾಗಳು. ನಾಡಿಯಾರ ಮೂಲಕ ಅವರು ಭಾರತೀಯ ಬೆಳ್ಳಿತೆರೆಗೆ ಸ್ಟಂಟ್ ಹಿರೋಯಿನ್ ಪರಿಚಯಿಸಿದರು. ಸಹೋದರರಲ್ಲೊಬ್ಬರಾದ ನಿರ್ದೇಶಕ, ನಿರ್ಮಾಪಕ, ಚಿತ್ರಕಥಾ ಲೇಖಕ ಬೊಮನ್ ವಾಡಿಯಾ (13/09/1901 – 04/01/1986) ಅವರ ಜನ್ಮದಿನವಿಂದು. (Photo Courtesy: Film History Pics)

ವಾಡಿಯಾ ನೆನಪು
- ಹಿಂದಿ ಸಿನಿಮಾ
Share this post