ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಹೇಮಾವತಿ

ಸಿದ್ದಲಿಂಗಯ್ಯ ನಿರ್ದೇಶನದ ‘ಹೇಮಾವತಿ’ (1977) ಚಿತ್ರದಲ್ಲಿ ಜಿ.ವಿ.ಅಯ್ಯರ್, ಉದಯಕುಮಾರ್‌, ಯೋಗಾನರಸಿಂಹ, ಸತ್ಯಭಾಮಾ. ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರಚನೆಯ ಕಾದಂಬರಿ ಆಧರಿಸಿ ತಯಾರಾದ ಸಿನಿಮಾ. ಜಾತಿ ಕಟ್ಟುಪಾಡುಗಳನ್ನು ಎದುರು ಹಾಕಿಕೊಂಡು ಎದುರಿಸಬೇಕಾದ ಸಂಘರ್ಷ ಚಿತ್ರದ ಕಥಾವಸ್ತು. ನಿರ್ದೇಶಕ ಸಿದ್ದಲಿಂಗಯ್ಯನವರೇ ಚಿತ್ರಕಥೆ ರಚಿಸಿದ್ದು, ಹುಣಸೂರು ಕೃಷ್ಣಮೂರ್ತಿ ಸಂಭಾಷಣೆ ಬರೆದಿದ್ದಾರೆ. ಜೈನ್ ಕಂಬೈನ್ಸ್‌ ಬ್ಯಾನರ್‌ನಡಿ ಎನ್‌.ವೀರಾಸ್ವಾಮಿ, ವರದಪ್ಪ, ಜಂದೂಲಾಲ್ ಜೈನ್ ಮತ್ತು ಸಿದ್ದಲಿಂಗಯ್ಯ ಚಿತ್ರದ ನಿರ್ಮಾಪಕರು. ಎಲ್‌.ವೈದ್ಯನಾಥನ್‌ ಸಂಗೀತ ಸಂಯೋಜನೆ, ಶ್ರೀಕಾಂತ್ ಛಾಯಾಗ್ರಹಣ, ಭಕ್ತವತ್ಸಲಂ ಸಂಕಲನ ಚಿತ್ರಕ್ಕಿದೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು