ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಶತ್ರಂಜ್ ಕೆ ಖಿಲಾಡಿ – 44

ಸತ್ಯಜಿತ್ ರೇ ನಿರ್ದೇಶನದ ‘ಶತ್ರಂಜ್‌ ಕೆ ಖಿಲಾಡಿ’ (1977) ಹಿಂದಿ ಸಿನಿಮಾ ತೆರೆಕಂಡು ಇಂದಿಗೆ (ಆಗಸ್ಟ್‌ 11) ನಲವತ್ನಾಲ್ಕು ವರ್ಷ. ಪುಣೆಯಲ್ಲಿ ನಡೆದ ಸಿನಿಮಾ ಚಿತ್ರೀಕರಣದ ಸಂದರ್ಭದ ಈ ಫೋಟೊದಲ್ಲಿ ನಟರಾದ ಸಯೀದ್ ಜಾಫ್ರಿ, ಸಂಜೀವ್ ಕುಮಾರ್‌ ಮತ್ತು ನಿರ್ದೇಶಕ ಸತ್ಯಜಿತ್ ರೇ ಇದ್ದಾರೆ. ಖ್ಯಾತ ಲೇಖಕ ಮುನ್ಷಿ ಪ್ರೇಮ್‌ಚಂದ್‌ ರಚನೆಯ ಇದೇ ಶೀರ್ಷಿಕೆಯ ಸಣ್ಣ ಕತೆಯನ್ನು ಆಧರಿಸಿದ ಸಿನಿಮಾ. 1857ರ ಸಿಪಾಯಿ ದಂಗೆ ಹಿನ್ನೆಲೆಯಲ್ಲಿ ಸಾಗುವ ಕತೆ. ‘ದಿ ಚೆಸ್‌ ಪ್ಲೇಯರ್ಸ್‌’ ಶೀರ್ಷಿಕೆಯಡಿ ಈ ಸಿನಿಮಾ ವಿದೇಶಗಳಲ್ಲಿ ಬಿಡುಗಡೆಯಾಗಿತ್ತು. ಸತ್ಯಜಿತ್ ರೇ ನಿರ್ದೇಶನದಲ್ಲಿ ತೆರೆಗೆ ಬಂದ ಏಕೈಕ ಹಿಂದಿ ಕಥಾಚಿತ್ರವಿದು. ‘ಅತ್ಯುತ್ತಮ ವಿದೇಶಿ ಭಾಷಾ ಸಿನಿಮಾ’ ವಿಭಾಗದಲ್ಲಿ 51ನೇ ಅಕಾಡೆಮಿ ಪ್ರಶಸ್ತಿಗೆ ಈ ಸಿನಿಮಾ ನಾಮನಿರ್ದೇಶನಗೊಂಡಿತ್ತು. (Photo Courtesy: Film History Pics)

Share this post