‘ಕಾಗಜ್ ಕೆ ಫೂಲ್’ ಹಿಂದಿ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಟ – ನಿರ್ದೇಶಕ ಗುರುದತ್, ಸಿನಿಮಾ ಛಾಯಾಗ್ರಾಹಕ ವಿ.ಕೆ.ಮೂರ್ತಿ. ಹಿಂದಿ ಚಿತ್ರರಂಗದಲ್ಲಿ ‘ಮೂರ್ತಿ ಸಾಬ್’ ಎಂದು ಗೌರವದಿಂದ ಕರೆಸಿಕೊಳ್ಳುತ್ತಿದ್ದ ವಿ.ಕೆ.ಮೂರ್ತಿ ಮೈಸೂರಿನವರು. ಬೆಳ್ಳಿತೆರೆಯ ಮೇಲೆ ಕ್ಯಾಮರಾದಿಂದ ದೃಶ್ಯಕಾವ್ಯ ಸೃಷ್ಟಿಸಿದ ತಂತ್ರಜ್ಞ. ‘ಹೂವು ಹಣ್ಣು’ ಕನ್ನಡ ಚಿತ್ರಕ್ಕೆ ಅವರ ಛಾಯಾಗ್ರಹಣವಿದೆ. ಇಂದು ವಿ.ಕೆ.ಮೂರ್ತಿ (26/11/1923 – 07/04/2014) ಅಗಲಿದ ದಿನ. (Photo courtesy: Bollywoodirect)

ಛಾಯಾಗ್ರಾಹಕ ವಿ.ಕೆ.ಮೂರ್ತಿ ನೆನಪು
- ಭಾರತೀಯ ಸಿನಿಮಾ
Share this post