ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ದೇವಾನಂದ್ ನೆನಪು

ಸಮಾರಂಭವೊಂದರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರೊಂದಿಗೆ ಹಿಂದಿ ಚಿತ್ರರಂಗದ ಮೇರು ನಟರಾದ ದಿಲೀಪ್ ಕುಮಾರ್‌, ದೇವಾನಂದ್‌ ಮತ್ತು ರಾಜ್‌ಕಪೂರ್‌. ಹಿಂದಿ ಚಿತ್ರರಂಗ ಕಂಡ ಯಶಸ್ವೀ ನಾಯಕನಟ ದೇವಾನಂದ್‌. ‘ಹಮ್ ಏಕ್ ಹೈ’ (1946) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಅವರು ರೊಮ್ಯಾಂಟಿಕ್‌ ಹೀರೋ ಆಗಿ ಸಿನಿಪ್ರೇಮಿಗಳ ಅಪಾರ ಮೆಚ್ಚುಗೆಗೆ ಪಾತ್ರರಾದರು. ಆರು ದಶಕಗಳ ವೃತ್ತಿ ಬದುಕಿನಲ್ಲಿ ನಟ – ನಿರ್ದೇಶಕರಾಗಿ ಅವರದ್ದು ಗಮನಾರ್ಹ ಸಾಧನೆ. ಅವರ ನಿರ್ಮಾಣದ ‘ಗೈಡ್‌’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಷಿಕ ಭಾಷಾ ಸಿನಿಮಾ ರಾಷ್ಟ್ರಪ್ರಶಸ್ತಿ ಸಂದಿದೆ. ‘ಗೈಡ್‌’ ಮತ್ತು ‘ಕಾಲಾಪಾನಿ’ ಚಿತ್ರದ ಉತ್ತಮ ನಟನೆಗೆ ಅವರಿಗೆ ಫಿಲ್ಮ್‌ಫೇರ್‌ ಪ್ರಶಸ್ತಿ ಸಂದಿದೆ. ಪದ್ಮಭೂಷಣ ಪುರಸ್ಕೃತ ನಟನಿಗೆ ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿ ‘ದಾದಾಸಾಹೇಬ್‌ ಫಾಲ್ಕೆ’ ಗೌರವ ಸಂದಿದೆ. ಇಂದು ದೇವಾನಂದ್‌ (26/09/1923 – 03/12/2011) ಜನ್ಮದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು