ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟ ಕಲ್ಯಾಣ್ ಕುಮಾರ್

ಕನ್ನಡ ಚಿತ್ರರಂಗದ ಕುಮಾರತ್ರಯರಲ್ಲೊಬ್ಬರಾದ ನಟ ಕಲ್ಯಾಣ್ ಕುಮಾರ್ ಅಗಲಿ ಇಂದಿಗೆ (ಆಗಸ್ಟ್‌ 1) ಇಪ್ಪತ್ತೆರೆಡು ವರ್ಷ. ‘ನಟಶೇಖರ’ (1954) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಕಲ್ಯಾಣ್ ಕುಮಾರ್ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳ ಇನ್ನೂರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಮೊದಲ ಪೂರ್ಣ ಪ್ರಮಾಣದ ವರ್ಣಚಿತ್ರ ‘ಅಮರಶಿಲ್ಪಿ ಜಕಣಾಚಾರಿ’ ಚಿತ್ರದ ಹೀರೋ. 60, 70ರ ದಶಕಗಳ ಹಲವಾರು ಪ್ರಮುಖ ಚಿತ್ರಗಳ ಗಮನಾರ್ಹ ಪಾತ್ರಗಳಲ್ಲಿ ಕಲ್ಯಾಣ್ ಕುಮಾರ್‌ ನೆನಪಾಗುತ್ತಾರೆ. (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

Share this post