ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟಿ ಸುಮಲತಾ – 58

ಪಿ.ಪದ್ಮರಾಜನ್‌ ನಿರ್ದೇಶನದ ‘ತೂವನದುಂಬಿಕಲ್‌’ (1987) ಮಲಯಾಳಂ ಚಿತ್ರದಲ್ಲಿ ಸುಮಲತಾ. ‘ಥಿಸೈ ಮಾರಿಯಾ ಪರವೈಗಳ್‌’ (1979) ತಮಿಳು ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಸುಮಲತಾ ಪಂಚಭಾಷಾ ತಾರೆ. ಡಾ.ರಾಜಕುಮಾರ್ ಜೋಡಿಯಾಗಿ ‘ರವಿಚಂದ್ರ’ ಚಿತ್ರದೊಂದಿಗೆ ಅವರು ಕನ್ನಡ ಸಿನಿಮಾ ಪ್ರವೇಶಿಸಿದರು. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳ 130ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಆಹುತಿ, ತಾಯಿಯ ಹೊಣೆ, ಕರ್ಣ, ನ್ಯೂಡೆಲ್ಲಿ, ಕಲಿಯುಗ ಭೀಮ, ಎಕ್ಸ್‌ಕ್ಯೂಸ್‌ಮಿ, ದೊಡ್ಮನೆ ಹುಡುಗ… ಅವರ ಕೆಲವು ಪ್ರಮುಖ ಕನ್ನಡ ಚಿತ್ರಗಳು. ಇಂದು (ಆಗಸ್ಟ್‌ 27) ಸುಮಲತಾ 58ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು