ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅನ್ವೇಷಣೆ

ಟಿ.ಎಸ್‌.ನಾಗಾಭರಣ ನಿರ್ದೇಶನದ ‘ಅನ್ವೇಷಣೆ’ (1983) ಚಿತ್ರದಲ್ಲಿ ಸ್ಮಿತಾ ಪಾಟೀಲ್‌, ಅನಂತನಾಗ್‌ ಮತ್ತು ಬೇಬಿ ಸುಷ್ಮಾ (ನಟಿ, ಗಾಯಕಿ ಬಿ.ಜಯಶ್ರೀ ಅವರ ಪುತ್ರಿ). ನಾಗಾಭರಣ ಮತ್ತು ಗಿರೀಶ್ ಕಾರ್ನಾಡ್‌ ಚಿತ್ರಕಥೆ ರಚಿಸಿದ್ದು, ವಿಜಯ ಭಾಸ್ಕರ್‌ ಸಂಗೀತ ಸಂಯೋಜನೆ, ಎಸ್‌.ರಾಮಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ. ‘ಅನ್ವೇಷಣೆ’ಗೆ ಮೂರನೇ ಅತ್ಯುತ್ತಮ ಚಿತ್ರ ರಾಜ್ಯಪ್ರಶಸ್ತಿ ಗೌರವ ಲಭಿಸಿದೆ. ಭಾರತದ ಹೊಸ ಅಲೆಯ ಸಿನಿಮಾಗಳ ಯಾದಿಯಲ್ಲಿ ಅತ್ಯಂತ ಪ್ರಮುಖವಾಗಿ ಪ್ರಸ್ತಾಪವಾಗುವ ಹೆಸರು ಸ್ಮಿತಾ ಪಾಟೀಲ್‌. ಭಾವಪೂರ್ಣ ಅಭಿನಯ, ದೇಸಿತನದ ಅವರ ಪಾತ್ರಗಳು ಇಂದಿಗೂ ಜೀವಂತ. ಚಿಕ್ಕ ಅವಧಿಯಲ್ಲೇ ದೊಡ್ಡ ಸಾಧನೆ ಮಾಡಿದ ನಟಿ. ಹತ್ತು ವರ್ಷಗಳ ಸಿನಿಮಾ ಬದುಕಿನಲ್ಲಿ ಹಿಂದಿ, ಬೆಂಗಾಲಿ, ಮರಾಠಿ, ಗುಜರಾತಿ, ಮಲಯಾಳಂ ಮತ್ತು ಕನ್ನಡದ ಸುಮಾರು 75ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು. ಸ್ಮಿತಾ ಪಾಟೀಲ್ (17/10/1955 – 13/12/1986) ಇಂದು ನಮ್ಮೊಂದಿಗೆ ಇದ್ದಿದ್ದರೆ 66ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. (Photo Courtesy: Sushma Veer)

Share this post