ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟ ಬಾಲ ಗಂಧರ್ವ ನೆನಪು

ಕೆ.ಪಿ.ಖಾಡಿಲ್ಕರ್‌ ರಚನೆಯ ‘ಸ್ವಯಂವರ’ ಮರಾಠಿ ನಾಟಕದ ರುಕ್ಮಿಣಿ ಪಾತ್ರದಲ್ಲಿ ಬಾಲ ಗಂಧರ್ವ. ಮರಾಠಿ ರಂಗಭೂಮಿಯ ಜನಪ್ರಿಯ ನಟ – ಗಾಯಕ ಬಾಲ ಗಂಧರ್ವ (26/06/1888 – 15/07/1967). ಅವರ ಜನ್ಮನಾಮ ನಾರಾಯಣ ಶ್ರೀಪಾದ ರಾಜಹನ್ಸ್. ಭಾರತೀಯ ರಂಗಭೂಮಿಯ ಸಂದರ್ಭದಲ್ಲಿ ಸ್ತ್ರೀಪಾತ್ರಗಳ ಮೂಲಕ ಖ್ಯಾತಿ ಗಳಿಸಿದವ ಕಲಾವಿದ. ಸಾಮಾನ್ಯ ಪ್ರೇಕ್ಷಕರಿಗೆ ‘ಸಂಗೀತ ನಾಟಕ’ ಮತ್ತು ‘ನಾಟ್ಯ ಸಂಗೀತ’ ತಲುಪಿಸುವ ನಿಟ್ಟಿನಲ್ಲಿ ಬಾಲ ಗಂಧರ್ವ ಅವರ ಕೊಡುಗೆ ಮಹತ್ವದ್ದು. ಪದ್ಮಭೂಷಣ ಪುರಸ್ಕೃತ ನಟನಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಸಂದಿದೆ. ಇಂದು ಅವರ ಜನ್ಮದಿನ. (Photo Courtesy: writer Mohan Nadakarni)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು