ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕೆ.ವಿ.ರಾಜು – 67

‘ಹೊಸನೀರು’ (1986) ಸಿನಿಮಾ ಚಿತ್ರೀಕರಣದ ಸಂದರ್ಭ. ಕೆ.ವಿ.ಜಯರಾಂ (ಮಧ್ಯೆ ಇರುವವರು) ನಿರ್ದೇಶನದ ಈ ಚಿತ್ರಕ್ಕೆ ಅವರ ಕಿರಿಯ ಸಹೋದರ ಕೆ.ವಿ.ರಾಜು (ಎಡ ತುದಿ) ಸಹಾಯಕ ನಿರ್ದೇಶಕ, ಬರಹಗಾರರಾಗಿ ಕೆಲಸ ಮಾಡಿದ್ದರು. ಚಿತ್ರದ ಛಾಯಾಗ್ರಾಹಕ ಬಿ.ಎಸ್‌.ಬಸವರಾಜು ಫೋಟೊದಲ್ಲಿದ್ದಾರೆ. ಕೆ.ವಿ.ರಾಜು ಅವರು ಸಂಗ್ರಾಮ, ಯುದ್ಧಕಾಂಡ, ಇಂದ್ರಜಿತ್‌, ನವಭಾರತ, ಕದನ, ಬೆಳ್ಳಿ ಮೋಡಗಳು, ಹುಲಿಯಾ ಸೇರಿದಂತೆ ಹದಿನೈದಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದು, 50ಕ್ಕೂ ಹೆಚ್ಚು ಚಿತ್ರಗಳಿಗೆ ಚಿತ್ರಕಥೆ – ಸಂಭಾಷಣೆ ರಚಿಸಿದ್ದಾರೆ. ‘ಇಂದ್ರಜಿತ್‌’ ಮತ್ತು ‘ಉಧಾರ್‌ ಕೆ ಜಿಂದಗಿ’ ಅವರ ನಿರ್ದೇಶನದ ಹಿಂದಿ ಚಿತ್ರಗಳು. ಇಂದು (ಜುಲೈ 7) ಕೆ.ವಿ.ರಾಜು ಅವರ 67ನೇ ಹುಟ್ಟುಹಬ್ಬ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು