ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಭಕ್ತ ಕುಂಬಾರ ಮತ್ತು ಭಾರತ್ ಟಾಕೀಸ್

ಪೋಸ್ಟ್ ಶೇರ್ ಮಾಡಿ

ಸಿನಿಮಾ ಕಲಾವಿದರು, ತಂತ್ರಜ್ಞರು, ವಿತರಕರು, ಪ್ರದರ್ಶಕರು… ಚಿತ್ರೋದ್ಯಮದ ಎಲ್ಲರೂ ಒಂದು ಕುಟುಂಬ ಎನ್ನುವ ಭಾವನೆಯಿದ್ದ ಕಾಲವದು. ಪರಸ್ಪರರು ಸಹಕಾರ – ವಿಶ್ವಾಸದಿಂದಿರುತ್ತಿದ್ದರು. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ `ಭಕ್ತಕುಂಬಾರ’ ಸಿನಿಮಾದ ಶತದಿನೋತ್ಸವದ ಸಂಭ್ರಮವಿದು. ಈ ಚಿತ್ರ ಬೆಂಗಳೂರಿನ ಭಾರತ್ ಟಾಕೀಸ್‍ನಲ್ಲಿ ನೂರು ದಿನ ಪ್ರದರ್ಶನ ಕಂಡಿತ್ತು. ಭಾರತ್ ಟಾಕೀಸ್‍ನಲ್ಲಿ ನಡೆದ ಶತದಿನೋತ್ಸವದ ಸಂದರ್ಭದಲ್ಲಿ ಚಿತ್ರಮಂದಿರದ ಮಾಲೀಕರು ಈ ಸಿನಿಮಾದ ಕಲಾವಿದರು ಹಾಗೂ ತಂತ್ರಜ್ಞರಿಗೆ ಸ್ಮರಣಿಕೆ ನೀಡಿ ಗೌರವಿಸಿದ್ದರು.

‘ಭಕ್ತ ಕುಂಬಾರ’ ಶತದಿನೋತ್ಸವ ಸಮಾರಂಭದಲ್ಲಿ ಕುಟುಂಬದವರೊಂದಿಗೆ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು

ಷರೀಫ್ ಸಹೋದರರ ಒಡೆತನದ `ಭಾರತ್’ ಟಾಕೀಸ್ ಬೆಂಗಳೂರಿನ ಮಿನರ್ವ ಸರ್ಕಲ್ ಸಮೀಪವಿತ್ತು. ಆರ್.ಲಕ್ಷ್ಮಣ್‌ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಿತ್ರಮಂದಿರ ಕನ್ನಡ ಚಿತ್ರಗಳಿಗೆ ಮೀಸಲಾಗಿತ್ತು ಎನ್ನುವುದು ವಿಶೇಷ. ಶಿಸ್ತಿನ ವ್ಯಕ್ತಿ ಲಕ್ಷ್ಮಣ್‌ ಅವರ ನಿರ್ವಹಣೆಯಲ್ಲಿ ಚಿತ್ರಮಂದಿರ ಉತ್ತಮ ಹೆಸರು ಗಳಿಸಿತ್ತು ಎಂದು ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಸ್ಮರಿಸಿಕೊಳ್ಳುತ್ತಾರೆ. ಕಾಲಕ್ರಮೇಣ ಭಾರತ್ ಸೇರಿದಂತೆ ಅದರ ಸಮೀಪವೇ ಇದ್ದ ಮಿನರ್ವ ಮತ್ತು ಶಿವಾಜಿ ಚಿತ್ರಮಂದಿರಗಳು ಮುಚ್ಚಿಹೋದವು.

(ಫೋಟೊಗಳು: ಪ್ರಗತಿ ಅಶ್ವತ್ಥ ನಾರಾಯಣ)

`ಭಕ್ತಕುಂಬಾರ’ ಶತದಿನೋತ್ಸವ ಸಮಾರಂಭದಲ್ಲಿ ಭಾರತ್ ಟಾಕೀಸ್ ಮಾಲೀಕರಾದ ಷರೀಫ್ ಅವರು ರಾಜ್ಗೆ ಸ್ಮರಣಿಕೆ ನೀಡಿ ಗೌರವಿಸಿದ ಸಂದರ್ಭ

ಇನ್ನಷ್ಟು ಕಥೆ

ಹೆಳವನಕಟ್ಟೆ ಗಿರಿಯಮ್ಮ

ಸಂಕೇತ್ ಸ್ಟುಡಿಯೋದಲ್ಲಿ ‘ಹೆಳವನಕಟ್ಟೆ ಗಿರಿಯಮ್ಮ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಪಿಬಿಎಸ್ ಜೊತೆ

ಮೂವಿಂಗ್ ಶಾಟ್!

ಈಗ ಸಿನಿಮಾ, ಕಿರುತೆರೆ ಚಿತ್ರೀಕರಣಗಳಲ್ಲಿ ಜಿಮ್ಮೀ ಜಿಬ್ ಸೇರಿದಂತೆ ಆಧುನಿಕ ಪರಿಕರಗಳಿಂದ ಮೂವಿಂಗ್‌

ಕನ್ನಯ್ಯರಾಮ – ಅನಂತನಾಗ್‌

ಆಗಿನ್ನೂ ಅನಂತನಾಗ್ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿರಲಿಲ್ಲ. ‘ಅಂಕುರ್’, ‘ನಿಶಾಂತ್’, ‘ಮಂಥನ್’ ಹಿಂದಿ ಸಿನಿಮಾಗಳು

ಜನಪ್ರಿಯ ಪೋಸ್ಟ್ ಗಳು

18ರ ಹರೆಯದಲ್ಲೇ ಚೀಫ್ ಮೇಕಪ್‌ಮ್ಯಾನ್‌!

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಸಾಕ್ಷಾತ್ಕಾರ’ ಚಿತ್ರಕ್ಕೆ ಎಂ.ಎಸ್‌.ಸುಬ್ಬಣ್ಣ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಎರಡು ಶೆಡ್ಯೂಲ್ ಚಿತ್ರೀಕರಣ

ಇದು ನಟಿ ಆರತಿ ಕ್ಲಿಕ್ಕಿಸಿದ ಫೋಟೊ!

ತಮ್ಮ ಕ್ಯಾಮರಾಗಳ ಮೂಲಕ ಎಲ್ಲರ ನೆನಪುಗಳನ್ನು ಹಿಡಿದಿಡುವ ಛಾಯಾಗ್ರಾಹಕರು ತಮಗಾಗಿ ಫೋಟೋ ತೆಗೆದಿಟ್ಟುಕೊಳ್ಳುವುದು ತೀರಾ ಅಪರೂಪ. ಅದರಲ್ಲೂ ಅಂದಿನ ದುಬಾರಿ