ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಮೃತ ಗಳಿಗೆ – ‘ಪ್ರಗತಿ’ ಸ್ಥಿರಚಿತ್ರ

ಪೋಸ್ಟ್ ಶೇರ್ ಮಾಡಿ

ಆಗ ಸಿನಿಮಾದಲ್ಲಿ ಸ್ಟಿಲ್ ಫೋಟೋಗ್ರಾಫರ್ ಮತ್ತು ಛಾಯಾಗ್ರಾಹಕ ಜೊತೆಜೊತೆಗೇ ಕೆಲಸ ಮಾಡಬೇಕಿತ್ತು. ತಂತ್ರಜ್ಞಾನದ ಇತಿಮಿತಿಗಳಲ್ಲೇ ಸಿನಿಮಾ ತಯಾರಾಗುತ್ತಿದ್ದ ಕಾಲವದು. ಸನ್ನಿವೇಶಗಳ ಕಂಟ್ಯೂನಿಟಿಗೆ ಸ್ಟಿಲ್ ಫೋಟೋಗ್ರಫಿಯನ್ನೇ ಅವಲಂಬಿಸಬೇಕಿತ್ತು. ಸನ್ನಿವೇಶವೊಂದರಲ್ಲಿನ ಲೈಟಿಂಗ್, ವಿನ್ಯಾಸ, ಪರಿಕರಗಳು, ಕಲಾವಿದರ ವಸ್ತ್ರವಿನ್ಯಾಸ… ಹೀಗೆ ಎಲ್ಲಾ ಸಂಗತಿಗಳು ಸ್ಥಿರಚಿತ್ರ ಛಾಯಾಗ್ರಾಹಕನ ಕ್ಯಾಮರದಲ್ಲೇ ದಾಖಲಾಗುತ್ತಿದ್ದವು. ಇಡೀ ಸಿನಿಮಾ ಯೂನಿಟ್‌ಗೆ ಸಪೋರ್ಟಿವ್ ಆಗಿ ಕೆಲಸ ಮಾಡುತ್ತಿದ್ದ ಸ್ಟಿಲ್ ಫೋಟೋಗ್ರಾಫರ್‌ಗೆ ಮಹತ್ವದ ಜವಾಬ್ದಾರಿಯೇ ಇರುತ್ತಿತ್ತು. ಉಳಿದಂತೆ ಸ್ಟಿಲ್‌ಗಳು ಪ್ರಮುಖವಾಗಿ ಸಿನಿಮಾ ಪ್ರಚಾರಕ್ಕೆ ಬಳಕೆಯಾಗುತ್ತಿದ್ದವು.

ಪುಟ್ಟಣ್ಣನವರ ‘ಅಮೃತ ಗಳಿಗೆ’ ಚಿತ್ರಕ್ಕೆ ಪ್ರಗತಿ ಅಶ್ವತ್ಥ ನಾರಾಯಣ ಅವರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಇಲ್ಲಿನ ಈ ಫೋಟೊ ಸಿನಿಮಾ ಚಿತ್ರೀಕರಣ ಸಂದರ್ಭದ್ದು. ಕ್ಯಾಮರಾ ಆಂಗಲ್‌, ಲೈಟಿಂಗ್ ಬಗ್ಗೆ ನಿರ್ದೇಶಕ ಪುಟ್ಟಣ್ಣ ಅಪಾರ ಕಾಳಜಿ ವಹಿಸುತ್ತಿದ್ದರು. ಅವರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಛಾಯಾಗ್ರಾಹಕ ಬಿ.ಎಸ್‌.ಬಸವರಾಜು ಲೈಟಿಂಗ್ ಮಾಡಿದ್ದಾರೆ. ಸನ್ನಿವೇಶ ಚಿತ್ರಿಸಿದ ನಂತರ ಪ್ರಗತಿ ಅಶ್ವತ್ಥರು ಕ್ಲಿಕ್ಕಿಸಿಕೊಂಡ ಫೋಟೊ ಇದು. ಕತೆಗೆ ತಿರುವು ನೀಡುವ ಮೊದಲ ರಾತ್ರಿಯ ಸನ್ನಿವೇಶವಿದು. ಪಾತ್ರಧಾರಿಗಳ ಮ್ಯಾನರಿಸಂ, ವಿಶೇಷ ಲೈಟಿಂಗ್‌ ಮತ್ತು ಸ್ಥಿರಚಿತ್ರ ಛಾಯಾಗ್ರಾಹಕರ ಕೌಶಲ್ಯದಿಂದಾಗಿ ಈ ಫೋಟೊ ಇಡೀ ಸನ್ನಿವೇಶಕ್ಕೆ ಕನ್ನಡಿ ಹಿಡಿಯುತ್ತದೆ.

ನಿರ್ದೇಶಕ ಪುಟ್ಟಣ್ಣನವರೊಂದಿಗೆ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ

ಸಿನಿಮಾ ಛಾಯಾಗ್ರಾಹಕ ಬಿ.ಎಸ್‌.ಬಸವರಾಜು ಅವರು ಈ ಸಿನಿಮಾಗೆ ಲೈಟಿಂಗ್‌ ಮಾಡಿದ ಸಂದರ್ಭವನ್ನು ನೆನಪು ಮಾಡಿಕೊಳ್ಳುತ್ತಾ, “ಬೆಳಗಿನ ಹೊತ್ತು ಚಿತ್ರಿಸಿದರೆ ಸನ್‌ಲೈಟ್‌ ಲೀಕ್ ಆದ್ರೆ ಕಲರ್ಸ್ ಡೈಲೂಟ್ ಆಗುತ್ತೆ. ಅಂದುಕೊಂಡಷ್ಟು ಬ್ಲಾಕ್‌ನೆಸ್‌ ಸಿಗಲ್ಲ. ಹಾಗಾಗಿ ಈ ಸನ್ನಿವೇಶವನ್ನು ರಾತ್ರಿಯಲ್ಲೇ ಚಿತ್ರಿಸಬೇಕೆಂದು ನಾನು ಪುಟ್ಟಣ್ಣನವರಿಗೆ ಹೇಳಿದ್ದೆ. ಒಳಗಡೆ ಕೋಣೆಯಲ್ಲಿ ಸೀಮೆ ಎಣ್ಣೆಯ ಲಾಟೀನು ಲ್ಯಾಂಪ್ ಬಳಕೆ ಮಾಡಿದೆ. ಜೊತೆಗೊಂದು ಕೀ ಲೈಟ್‌ ಇಟ್ಟಿದ್ದೆ. ಕಿಟಿಕಿಯಿಂದ ಹೊರಗಡೆ ಕಾಣುವ ಮರದ ಮೆಲೆ ಬ್ಲ್ಯೂ ಲೈಟ್ (ಸೌರ್ಸ್ ಲೈಟ್‌) ಹಾಕಿದ್ದರಿಂದ ಸನ್ನಿವೇಶಕ್ಕೆ ಹೊಸ ಅರ್ಥ ಬಂತು” ಎನ್ನುತ್ತಾರೆ. ಈ ಚಿತ್ರದ ಉತ್ತಮ ಛಾಯಾಗ್ರಹಣಕ್ಕಾಗಿ ಅವರಿಗೆ ರಾಜ್ಯಪ್ರಶಸ್ತಿ ಸಂದಿದೆ.

ಸಿನಿಮಾ ಛಾಯಾಗ್ರಾಹಕ ಬಿ.ಎಸ್‌.ಬಸವರಾಜು, ನಿರ್ದೇಶಕ ಪುಟ್ಟಣ್ಣ ಕಣಗಾಲ್‌

ಇನ್ನಷ್ಟು ಕಥೆ

ಹೆಳವನಕಟ್ಟೆ ಗಿರಿಯಮ್ಮ

ಸಂಕೇತ್ ಸ್ಟುಡಿಯೋದಲ್ಲಿ ‘ಹೆಳವನಕಟ್ಟೆ ಗಿರಿಯಮ್ಮ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಪಿಬಿಎಸ್ ಜೊತೆ

ಮೂವಿಂಗ್ ಶಾಟ್!

ಈಗ ಸಿನಿಮಾ, ಕಿರುತೆರೆ ಚಿತ್ರೀಕರಣಗಳಲ್ಲಿ ಜಿಮ್ಮೀ ಜಿಬ್ ಸೇರಿದಂತೆ ಆಧುನಿಕ ಪರಿಕರಗಳಿಂದ ಮೂವಿಂಗ್‌

ಕನ್ನಯ್ಯರಾಮ – ಅನಂತನಾಗ್‌

ಆಗಿನ್ನೂ ಅನಂತನಾಗ್ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿರಲಿಲ್ಲ. ‘ಅಂಕುರ್’, ‘ನಿಶಾಂತ್’, ‘ಮಂಥನ್’ ಹಿಂದಿ ಸಿನಿಮಾಗಳು

ಜನಪ್ರಿಯ ಪೋಸ್ಟ್ ಗಳು

ಹಾಡಿನ ಪುಸ್ತಕ

ಹೆಚ್ಚಿನ ಸಂಖ್ಯೆಯ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಲ್ಲದ ಆಗಿನ ಕಾಲದಲ್ಲಿ ಸಿನಿಮಾ ಪ್ರಚಾರಕ್ಕೆ ವಿವಿಧ ತಂತ್ರಗಳ ಮೊರೆಹೋಗಬೇಕಿತ್ತು. ಇಂತಹ ಹಾಡಿನ

‘ಗಂಧರ್ವಗಿರಿ’ ಮುಹೂರ್ತ

`ಶಂಕರಾಭರಣಂ’ ತೆಲುಗು ಸಿನಿಮಾ ಖ್ಯಾತಿಯ ನಟ ಸೋಮಯಾಜುಲು ಮುಖ್ಯಪಾತ್ರದಲ್ಲಿ ನಟಿಸಿದ್ದ `ಗಂಧರ್ವಗಿರಿ’ (1983) ಮುಹೂರ್ತದ ಸಂದರ್ಭವಿದು. ಚನ್ನರಾಯಪಟ್ಟಣ ಸಮೀಪದ ನುಗ್ಗೇಹಳ್ಳಿಯ

ಮೇಕಪ್‌ಮ್ಯಾನ್ ರಾಜಕುಮಾರ್!

ಮೈಸೂರು ಸಮೀಪದ ಮಹದೇವಪುರದಲ್ಲಿ ‘ಮನಮೆಚ್ಚಿದ ಹುಡುಗಿ’ (1987) ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಎಂ.ಎಸ್‌.ರಾಜಶೇಖರ್‌ ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜಕುಮಾರ್ ಮತ್ತು