ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಆರ್‌ಎನ್‌ಜೆ – ಚಿ.ಉದಯಶಂಕರ್ – ವಿಜಯನಾರಸಿಂಹ

ಪೋಸ್ಟ್ ಶೇರ್ ಮಾಡಿ

(ಫೋಟೊ – ಬರಹ: ಎನ್‌.ಎಸ್‌.ಶ್ರೀಧರಮೂರ್ತಿ)

ಕನ್ನಡ ಚಿತ್ರಗೀತೆಗಳ ‘ರತ್ನತ್ರಯರು’ ಎಂದೇ ಕರೆಯಬಹುದಾದ ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ ಮತ್ತು ವಿಜಯನಾರಸಿಂಹ ಮೂವರೂ ಒಟ್ಟಿಗೆ ಇರುವ ಅಪರೂಪದ ಪೋಟೋ ಇದು. ಈ ಫೋಟೊ ಸೆರೆಯಾದ ಸಂದರ್ಭ ಕೂಡ ವಿಶಿಷ್ಟವಾದದ್ದೇ. 1967ರಲ್ಲಿ ಬಿ.ಎ.ಅರಸ್ ಕುಮಾರ್ ತಮ್ಮದೇ ಪ್ರಸಿದ್ದ ನಾಟಕ ‘ಅಭಾಗಿನಿ’ಯನ್ನು ‘ಬಂಗಾರದ ಹೂವು’ ಶೀರ್ಷಿಕೆಯಡಿ ಚಿತ್ರವಾಗಿಸಲು ನಿರ್ಧರಿಸಿದರು. ಅವರಿಗೆ ಬೆಂಬಲವಾಗಿ ನಿಂತವರು ಅವರ ಬಾಲ್ಯದ ಸಹಪಾಠಿ ಚಿ.ಉದಯಶಂಕರ್. ಅವರ ನೆರವಿನಿಂದಲೇ ರಾಜ್ ಕುಮಾರ್, ಕಲ್ಪನಾ, ಶೈಲಶ್ರೀ, ಉದಯ ಕುಮಾರ್, ಬಾಲಕೃಷ್ಣ, ನರಸಿಂಹರಾಜು ಎಲ್ಲರೂ ಅಭಿನಯಿಸಲು ಒಪ್ಪಿದರು.

ಅರಸ್ ಕುಮಾರ್ ಅವರಿಗೆ ಮೂವರೂ ಗೀತರಚನೆಕಾರರಿಂದ ಒಟ್ಟಿಗೆ ಹಾಡು ಬರೆಸುವ ಹಂಬಲ. ಮೂವರೇ ಒಟ್ಟಿಗೆ ಬರೆದಿದ್ದರೂ ಒಂದೇ ಸ್ಟುಡಿಯೋದ ಸನ್ನಿವೇಶದಲ್ಲಿ ಬರೆದಿರಲಿಲ್ಲ. ಮದ್ರಾಸ್‌ನ ಗೋಲ್ಡನ್ ಸಿನಿ ಸ್ಟುಡಿಯೋದಲ್ಲಿ ಇಂತಹ ಸನ್ನಿವೇಶ ರೂಪುಗೊಂಡಿತು. ರಾಜನ್ – ನಾಗೇಂದ್ರ ಸಂಗೀತ ನಿರ್ದೇಶಕರು. ಸಾವಿರಾರು ಅಮರ ಗೀತೆಗಳನ್ನು ಸೃಷ್ಟಿಸಿದ ಎಸ್.ಪಿ.ರಾಮನಾಥನ್ ಮತ್ತು ಕೋಟೇಶ್ವರ ರಾವ್ ರೆಕಾರ್ಡಿಸ್ಟ್‌ಗಳು. ಜಯಗೋಪಾಲ್ ಅವರ ‘ಆ ಮೊಗವು ಎಂಥಾ ಚೆಲುವು’ ಉದಯಶಂಕರ್ ಅವರ “ಓಡುವ ನದಿ ಸಾಗರವ’ ಮತ್ತು ವಿಜಯನಾರಸಿಂಹ ಅವರ ‘ನೀ ನಡೆವ ಹಾದಿಯಲ್ಲಿ’ ಒಟ್ಟಿಗೆ ಸೃಷ್ಟಿಯಾದವು. ನಂತರ ಮೂವರೂ ಲಜ್ ಸರ್ಕಲ್‌ನಲ್ಲಿದ್ದ ‘ವಿಸ್ಡನ್’ ಹೋಟೆಲ್‌ನಲ್ಲಿ ಕಾಫಿ ಕುಡಿದು ಹೊರಬಂದಾಗ ಉದಯಶಂಕರ್, “ಬನ್ರೋ ಇಲ್ಲಿನ ಲಿಂಗಂ ಸ್ಟುಡಿಯೋದಲ್ಲಿ ಪೋಟೋಗಳು ಚೆನ್ನಾಗಿ ಬರ್ತಾವಂತೆ, ತೆಗೆಸಿಕೊಳ್ಳೋಣ” ಎಂದರು. ಹಾಗೆ ಸೃಷ್ಟಿಯಾಗಿದ್ದು ಈ ಚಾರಿತ್ರಿಕ ಪೋಟೋ.

ಆರ್‌.ಎನ್‌.ಜಯಗೋಪಾಲ್, ಚಿ.ಉದಯಶಂಕರ್‌, ವಿಜಯನಾರಸಿಂಹ

ಇನ್ನಷ್ಟು ಕಥೆ

ಹೆಳವನಕಟ್ಟೆ ಗಿರಿಯಮ್ಮ

ಸಂಕೇತ್ ಸ್ಟುಡಿಯೋದಲ್ಲಿ ‘ಹೆಳವನಕಟ್ಟೆ ಗಿರಿಯಮ್ಮ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಪಿಬಿಎಸ್ ಜೊತೆ

ಮೂವಿಂಗ್ ಶಾಟ್!

ಈಗ ಸಿನಿಮಾ, ಕಿರುತೆರೆ ಚಿತ್ರೀಕರಣಗಳಲ್ಲಿ ಜಿಮ್ಮೀ ಜಿಬ್ ಸೇರಿದಂತೆ ಆಧುನಿಕ ಪರಿಕರಗಳಿಂದ ಮೂವಿಂಗ್‌

ಕನ್ನಯ್ಯರಾಮ – ಅನಂತನಾಗ್‌

ಆಗಿನ್ನೂ ಅನಂತನಾಗ್ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿರಲಿಲ್ಲ. ‘ಅಂಕುರ್’, ‘ನಿಶಾಂತ್’, ‘ಮಂಥನ್’ ಹಿಂದಿ ಸಿನಿಮಾಗಳು

ಜನಪ್ರಿಯ ಪೋಸ್ಟ್ ಗಳು

ಹಾಡಿನ ಪುಸ್ತಕ

ಹೆಚ್ಚಿನ ಸಂಖ್ಯೆಯ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಲ್ಲದ ಆಗಿನ ಕಾಲದಲ್ಲಿ ಸಿನಿಮಾ ಪ್ರಚಾರಕ್ಕೆ ವಿವಿಧ ತಂತ್ರಗಳ ಮೊರೆಹೋಗಬೇಕಿತ್ತು. ಇಂತಹ ಹಾಡಿನ

ಮೇಕಪ್‌ಮ್ಯಾನ್ ರಾಜಕುಮಾರ್!

ಮೈಸೂರು ಸಮೀಪದ ಮಹದೇವಪುರದಲ್ಲಿ ‘ಮನಮೆಚ್ಚಿದ ಹುಡುಗಿ’ (1987) ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಎಂ.ಎಸ್‌.ರಾಜಶೇಖರ್‌ ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜಕುಮಾರ್ ಮತ್ತು