ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಮಂಡಿ’ – ನಾಸಿರುದ್ದೀನ್ ಷಾ

ಶ್ಯಾಂ ಬೆನಗಲ್ ನಿರ್ದೇಶನದ ‘ಮಂಡಿ’ (1983) ಹಿಂದಿ ಚಿತ್ರದಲ್ಲಿ ನಾಸಿರುದ್ದೀನ್ ಷಾ. ಲೇಖಕ ಗುಲಾಮ್ ಅಬ್ಬಾಸ್‌ ಅವರ ‘ಆನಂದಿ’ ಉರ್ದು ಸಣ್ಣ ಕತೆ ಆಧರಿಸಿದ ಚಿತ್ರವಿದು. ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ (ನಿತೀಶ್ ರಾಯ್‌) ರಾಷ್ಟ್ರಪ್ರಶಸ್ತಿಗೆ ಪಾತ್ರವಾದ ಸಿನಿಮಾ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತು. ಈ ಚಿತ್ರದಲ್ಲಿ 12 ಫಿಲ್ಮ್‌ಫೇರ್ ಪ್ರಶಸ್ತಿ ಪುರಸ್ಕೃತರು ನಟಿಸಿರುವುದು ವಿಶೇಷ – ಸ್ಮಿತಾ ಪಾಟೀಲ್‌, ಶಬಾನಾ ಅಜ್ಮಿ, ನೀನಾ ಗುಪ್ತಾ, ನಾಸಿರುದ್ದೀನ್ ಷಾ, ಓಂಪುರಿ, ಸಯೀದ್ ಜಾಫ್ರಿ, ಅನು ಕಪೂರ್‌, ಸತೀಶ್ ಕೌಶಿಕ್‌, ಪಂಕಜ್ ಕಪೂರ್, ಅಮರೀಶ್ ಪುರಿ, ಇಳಾ ಅರುಣ್‌ ಮತ್ತು ಕೆ.ಕೆ.ರೈನಾ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು