ಬೆಂಗಳೂರು ವುಡ್‌ಲ್ಯಾಂಡ್ ಹೋಟೆಲ್‌ನಲ್ಲಿ ಸಿದ್ದಲಿಂಗಯ್ಯ ನಿರ್ದೇಶನದ ‘ಬೂತಯ್ಯನ ಮಗ ಅಯ್ಯು’ (1974) ಚಿತ್ರದ ಶತದಿನೋತ್ಸವ ಸಮಾರಂಭದ ಸಂದರ್ಭ. ನಟ ಡಾ.ರಾಜಕುಮಾರ್, ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಚಿತ್ರಸಾಹಿತಿ ಹುಣಸೂರು ಕೃಷ್ಣಮೂರ್ತಿ ಇದ್ದಾರೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ರಚನೆಯ ‘ವಯ್ಯಾರಿ’ ಸಣ್ಣ ಕತೆಯನ್ನು ಆಧರಿಸಿದ ‘ಬೂತಯ್ಯನ ಮಗ ಅಯ್ಯು’ ಕನ್ನಡದ ಮಹತ್ವದ ಸಿನಿಮಾಗಳಲ್ಲೊಂದು. ಗೊರೂರರ ಮತ್ತೆರೆಡು ಕಾದಂಬರಿಗಳು ‘ಹೇಮಾವತಿ’ ಮತ್ತು ‘ಊರ್ವಶಿ’ ಕೂಡ ಅದೇ ಶೀರ್ಷಿಕೆಯಡಿ ಸಿನಿಮಾಗಳಾಗಿವೆ. ಸಿದ್ದಲಿಂಗಯ್ಯ ಮತ್ತು ಅಮರದೇವ ಈ ಚಿತ್ರಗಳ ನಿರ್ದೇಶಕರು. ಇಂದು ಗೊರೂರು ರಾಮಸ್ವಾಮಿ ಅಯ್ಯಂಗಾರ್ (04/07/1904 – 28/09/1991) ಅವರ ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಗೊರೂರು ನೆನಪು
- ಕನ್ನಡ ಸಿನಿಮಾ
Share this post