ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಿರ್ದೇಶಕ ಚೇತನ್ ಆನಂದ್ ನೆನಪು

‘ಕುದ್ರತ್‌’ (1981) ಹಿಂದಿ ಸಿನಿಮಾ ಚಿತ್ರೀಕರಣದಲ್ಲಿ ನಿರ್ದೇಶಕ ಚೇತನ್ ಅನಂದ್‌, ನಟರಾದ ರಾಜ್‌ಕುಮಾರ್ ಮತ್ತು ರಾಜೇಶ್ ಖನ್ನಾ. ಖ್ಯಾತ ಹಿಂದಿ ನಟ ದೇವಾನಂದ್ ಮತ್ತು ನಿರ್ದೇಶಕ ವಿಜಯ್‌ ಆನಂದ್‌ ಅವರ ಹಿರಿಯ ಸಹೋದರ ಚೇತನ್ ಆನಂದ್‌. ಇವರು ನಿರ್ದೇಶಿಸಿದ ಚೊಚ್ಚಲ ಸಿನಿಮಾ ‘ನೀಚಾ ನಗರ್‌’ (1946) ಕಾನ್ಸ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಗ್ರ್ಯಾಂಡ್‌ ಪ್ರಿಕ್ಸ್‌ ಗೌರವ ಪಡೆದಿತ್ತು. ಆಂಧಿಯಾ, ಟ್ಯಾಕ್ಸಿ ಡ್ರೈವರ್, ಫಂತೂಷ್‌, ಹಕೀಕತ್‌, ಹೀರ್ ರಾಂಝಾ, ಜಾನೇಮಾನ್‌ ಸೇರಿದಂತೆ ಹದಿನಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕಾಲಾ ಬಜಾರ್‌, ಅರ್ಪಣ್‌, ಕಿನಾರೇ ಕಿನಾರೇ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಂದು ಚೇತನ್ ಆನಂದ್ (03/01/1915 – 06/07/1997) ಸಂಸ್ಮರಣಾ ದಿನ. (Photo: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು