ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಂಗೀತ ನಿರ್ದೇಶಕ ಅನಿಲ್ ಬಿಸ್ವಾಸ್

ಗಾಯಕಿ ಲತಾ ಮಂಗೇಶ್ಕರ್ ಮತ್ತು ನಟಿ ಕಾಮಿನಿ ಕೌಶಲ್‌ ಅವರೊಂದಿಗೆ ಗಾಯಕ – ಸಂಗೀತ ಸಂಯೋಜಕ ಅನಿಲ್ ಬಿಸ್ವಾಸ್‌. ಹಿಂದಿ ಚಿತ್ರಸಂಗೀತದಲ್ಲಿ ಆರ್ಕೇಸ್ಟ್ರಾ ಸಂಗೀತ, ಕೋರಲ್ ಎಫೆಕ್ಟ್‌ ಅನ್ನು ಪೂರ್ಣಪ್ರಮಾಣದಲ್ಲಿ ಬಳಕೆ ಮಾಡಿದ ಸಂಗೀತ ಸಂಯೋಜಕ ಅನಿಲ್ ಬಿಸ್ವಾಸ್‌. ಉತ್ತಮ ಗಾಯಕರೂ ಹೌದು. ಪಾಶ್ಚಿಮಾತ್ಯ ಸಿಂಫೋನಿಕ್‌ ಸಂಗೀತದಲ್ಲಿ ಅಪಾರ ಪರಿಣತಿ ಇದ್ದ ಬಿಸ್ವಾಸ್‌ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ರೋಟಿ, ಕಿಸ್ಮತ್‌, ಅನೋಖಾ ಪ್ಯಾರ್‌, ತಾರಾನಾ, ವಾರಿಸ್‌, ಪರ್‌ದೇಸಿ, ಚಾರ್‌ ದಿಲ್‌ ಚಾರ್‌ ರಹೇ.. ಸೇರಿದಂತೆ 90ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಇಂದು (ಜುಲೈ7) ಅನಿಲ್ ಬಿಸ್ವಾಸ್‌ (07/07/1914 – 31/05/2003) ಜನ್ಮದಿನ. (Photo Courtesy: Film Histroy Pics)

Share this post