ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನ

Share this post

ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ 1934, ಮಾರ್ಚ್‌ 3ರಂದು ಬೆಂಗಳೂರು ಕಲಾಸಿಪಾಳ್ಯದಲ್ಲಿದ್ದ ‘ಪ್ಯಾರಾಮೌಂಟ್‌’ ಚಿತ್ರಮಂದಿರದಲ್ಲಿ ತೆರೆಕಂಡಿತು. ಷಾ ಚಮನ್‌ಲಾಲ್‌ ಡುಂಗಾಜಿ ಚಿತ್ರದ ನಿರ್ಮಾಪಕರು. ವೈ.ವಿ.ರಾವ್ ನಿರ್ದೇಶಕರು. 1903ರಲ್ಲಿ ವ್ಯಾಪಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅವರು ಚಿಕ್ಕಪೇಟೆಯಲ್ಲಿ ನೆಲೆನಿಂತು ಪಾತ್ರೆ ವ್ಯಾಪಾರದಲ್ಲಿ ಯಶಸ್ಸು ಗಳಿಸಿದ್ದರು. ಕನ್ನಡ ಸಿನಿಮಾ ಮಾಡಬೇಕೆನ್ನುವ ಡುಂಗಾಜಿ ಅವರಿಗೆ ಒತ್ತಾಸೆಯಾಗಿ ನಿಂತವರು ಆರ್‌.ನಾಗೇಂದ್ರರಾವ್‌.

ಬೆಳ್ಳಾವೆ ನರಹರಿ ಶಾಸ್ತ್ರಿಗಳು ರಚಿಸಿದ್ದ ಜನಪ್ರಿಯ ನಾಟಕ ‘ಸತಿ ಸುಲೋಚನಾ’ವನ್ನು ತೆರೆಗೆ ಅಳವಡಿಸುವುದೆಂದು ನಿರ್ಧಾರವಾಯ್ತು. ಚಿತ್ರದ ಸಂಭಾಷಣೆ, ಹಾಡುಗಳ ಜವಾಬ್ದಾರಿಯನ್ನು ಬೆಳ್ಳಾವೆಯವರಿಗೇ ವಹಿಸಲಾಯ್ತು. ಹೀಗಾಗಿ ನರಹರಿ ಶಾಸ್ತ್ರಿ ಅವರನ್ನು ಕನ್ನಡ ಚಿತ್ರರಂಗದ ಮೊದಲ ಕತೆಗಾರ, ಸಂಭಾಷಣೆ ರಚನೆಕಾರ, ಗೀತರಚನೆಕಾರರು ಎಂದು ಗುರುತಿಸಲಾಗುತ್ತದೆ.

ಆರ್‌.ನಾಗೇಂದ್ರರಾವ್‌ ‘ಸತಿ ಸುಲೋಚನ’ ಚಿತ್ರದಲ್ಲಿ ರಾವಣನ ಪಾತ್ರ ನಿರ್ವಹಿಸಿದ್ದಲ್ಲದೆ ಸಂಗೀತ ಸಂಯೋಜನೆಯ ಹೊಣೆಯನ್ನೂ ಹೊತ್ತರು. ನಾಯಕ ಇಂದ್ರಜಿತ್ ಪಾತ್ರದಲ್ಲಿ ಸುಬ್ಬಯ್ಯನಾಯ್ಡು, ಲಕ್ಷ್ಮಣನಾಗಿ ವೈ.ವಿ.ರಾವ್‌, ರಾಮನಾಗಿ ಡಿ.ಎನ್‌.ಮೂರ್ತಿರಾವ್‌, ನಾರದನ ಪಾತ್ರದಲ್ಲಿ ಶೇಷಾಚಲಂ, ಸುಲೋಚನಾ ಪಾತ್ರದಲ್ಲಿ ತ್ರಿಪುರಾಂಬ, ಮಂಡೋದರಿ ಪಾತ್ರದಲ್ಲಿ ಲಕ್ಷ್ಮೀಬಾಯಿ ಅಭಿನಯಿಸಿದರು.

ಕೊಲ್ಹಾಪುರದ ಛತ್ರಪತಿ ಸಿನಿಟೋನ್‌ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆದಿದ್ದು. 16 ಹಾಡುಗಳಿದ್ದವು ಎನ್ನಲಾಗುತ್ತದೆ. ಚಿತ್ರದ ಅಂದಾಜು ಬಜೆಟ್‌ 40 ಸಾವಿರ ರೂಪಾಯಿ. ಚಿತ್ರದಲ್ಲಿನ ‘ದೇವ ಗುರುಗಳೆಮಗೆ’ ಗೀತೆಯನ್ನು ಹಾಡಿದ ಆರ್.ನಾಗೇಂದ್ರರಾವ್ ಕನ್ನಡದ ಮೊದಲ ಗಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ‘ಭಲೇ ಭಲೇ ಪಾರ್ವತಿ ಬಲು ಚತುರೆ’ ಹಾಡಿದ ಲಕ್ಷ್ಮೀಬಾಯಿ ಮೊದಲ ಗಾಯಕಿ ಎನಿಸಿಕೊಂಡರು.

ಹಾಗೆ ನೋಡಿದರೆ ಕನ್ನಡ ವಾಕ್ಚಿತ್ರದ ಸಂದರ್ಭದಲ್ಲಿ ಮೊದಲು ಚಿತ್ರೀಕರಣ ಆರಂಭಿಸಿದ್ದು ‘ಭಕ್ತದೃವ’. ಚಿತ್ರದ ನಿರ್ಮಾಪಕರ ಮಧ್ಯೆಯ ವೈಮನಸ್ಸಿನಿಂದಾಗಿ ಚಿತ್ರೀಕರಣ ತಡವಾಯ್ತು. ‘ಸತಿ ಸುಲೋಚನ’ ತೆರೆಕಂಡ ಒಂದು ತಿಂಗಳ ನಂತರ ‘ಭಕ್ತದೃವ’ ಸಿನಿಮಾ ತೆರೆಗೆ ಬಂದು ಯಶಸ್ವೀ ಪ್ರದರ್ಶನ ಕಂಡಿತು.
(ಮಾಹಿತಿ ಕೃಪೆ: ರಘುನಾಥ ಚ.ಹ. ಅವರ ‘ಸತಿ ಸುಲೋಚನಾ’ ಕೃತಿ)

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ