ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಸುಮನ್‌ ರಂಗನಾಥನ್‌ ‘ತದ್ವಿರುದ್ಧ’ ಸಿನಿಮಾ ಈ ವಾರ ತೆರೆಗೆ

ಪೋಸ್ಟ್ ಶೇರ್ ಮಾಡಿ
ಸುಮನ್‌ ರಂಗನಾಥ್‌ 'ತದ್ವಿರುದ್ಧ' ಸಿನಿಮಾ ಈ ವಾರ ತೆರೆಗೆ

ಮರ್ಡರ್‌ ಮಿಸ್ಟರಿ ಕಥಾಹಂದರವಿರುವ ‘ತದ್ವಿರುದ್ಧ’ ಸಿನಿಮಾ ಈ ವಾರ (ಜುಲೈ 31) ತೆರೆಕಾಣುತ್ತಿದೆ. ಸುಚೇಂದ್ರ ಪ್ರಸಾದ್‌, ಸುಮನ್‌ ರಂಗನಾಥನ್‌, ವಿಕ್ರಂ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳು ಯಶಸ್ಸು ಕಂಡಿರುವ ಸಾಕಷ್ಟು ಉದಾಹರಣೆಗಳಿವೆ. ಅಂತಹುದೇ ವಿಭಿನ್ನ ಕಂಟೆಂಟ್ʼವುಳ್ಳ ‘ತದ್ವಿರುದ್ಧ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಈ ಚಿತ್ರ ಎಲ್ಲರ ಗಮನ ಸೆಳೆದಿದೆ. ಸ್ವಚ್ಛ ಕನ್ನಡದ ಮಾತಿನಿಂದ ಜನಪ್ರಿಯರಾಗಿರುವ ಸುಚೇಂದ್ರ ಪ್ರಸಾದ್, ಹಿರಿಯ ನಟಿ ಸುಮನ್ ರಂಗನಾಥ್ ಹಾಗೂ ವಿಕ್ರಮ್ ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು CHARMION MOTION PICTURES ಸಂಸ್ಥೆ ನಿರ್ಮಾಣ ಮಾಡಿದೆ. ವಿನೋದ್ ಜೆ ರಾಜ್ ನಿರ್ದೇಶಿಸಿದ್ದಾರೆ.

ವಾಸ್ತವಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದೆ ‘ತದ್ವಿರುದ್ಧ’ ಎಂದು ಶೀರ್ಷಿಕೆ ಬಗ್ಗೆ ನಿರ್ದೇಶಕ ವಿನೋದ್ ಜೆ ರಾಜ್ ಮಾಹಿತಿ ನೀಡಿದ್ದಾರೆ. ಛಾಯಾಗ್ರಹಣ ಹಾಗೂ ಸಂಕಲನವನ್ನು ನಿರ್ದೇಶಕರೇ ಮಾಡಿದ್ದಾರೆ. ಇದೊಂದು 90ರ ಕಾಲಘಟ್ಟದಲ್ಲಿ ನಡೆಯುವ ಕಥೆ‌. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿದೆ. ಸುಚೇಂದ್ರ ಪ್ರಸಾದ್, ಸುಮನ್ ರಂಗನಾಥ್, ವಿಕ್ರಮ್ ಸೇರಿದಂತೆ ಐದು ಪ್ರಮುಖಪಾತ್ರಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಐಶ್ವರ್ಯ ಬಿ ಶೆಟ್ಟಿ, ಸುವಿನ ಗೌಡ, ಪೂಜಾ ಗೌಡ, ಅಭಿಲಾಶ್ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಕೆ.ಆರ್ ರವಿಚಂದ್ರ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಈ ಬರಹಗಳನ್ನೂ ಓದಿ