ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ದಕ್ಷಿಣ ಸಿನಿಮಾ – ಒಂದಷ್ಟು ಮಾಹಿತಿ

Share this post

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ – ಈ ಚಿತ್ರರಂಗಗಳನ್ನು ಒಟ್ಟಾಗಿ ದಕ್ಷಿಣ ಭಾರತದ ಸಿನಿಮಾರಂಗ ಎಂದು ಗುರುತಿಸಲಾಗುತ್ತದೆ. ದಕ್ಷಿಣ ಭಾರತದ ಮೊದಲ ಟಾಕಿ ಸಿನಿಮಾ ‘ಕಾಳಿದಾಸ’ 1931, ಅಕ್ಟೋಬರ್ 31ರಂದು ತೆರೆಕಂಡಿತು. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತಯಾರಾದ ದ್ವಿಭಾಷಾ ಸಿನಿಮಾ. ಅರ್ದೆಶಿರ್ ಇರಾನಿ ನಿರ್ಮಿಸಿದ ಈ ಚಿತ್ರವನ್ನು ಎಚ್‌.ಎಂ.ರೆಡ್ಡಿ ನಿರ್ದೇಶಿಸಿದ್ದರು.

‘ಕಾಳಿದಾಸ’ ಚಿತ್ರದಲ್ಲಿ ಬಹುಪಾಲು ತಮಿಳು ಭಾಷೆಯಿತ್ತು. ಹಾಗಾಗಿ ‘ಭಕ್ತ ಪ್ರಹ್ಲಾದ’ (ತೆಲುಗು, 1932 ಫೆಬ್ರವರಿ 6) ಚಿತ್ರವನ್ನು ಪೂರ್ಣಪ್ರಮಾಣದ ತೆಲುಗು ಟಾಕಿ ಸಿನಿಮಾ ಎಂದು ಪರಿಗಣಿಸಲಾಗುತ್ತದೆ. ಎಚ್‌.ಎಂ.ರೆಡ್ಡಿ ಈ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ. ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ 1934, ಮಾರ್ಚ್‌ 3ರಂದು ಬಿಡುಗಡೆಯಾಯ್ತು. ಷಾ ಚಮನ್‌ಲಾಲ್‌ ಡುಂಗಾಜಿ ಚಿತ್ರದ ನಿರ್ಮಾಪಕರು, ವೈ.ವಿ.ರಾವ್ ನಿರ್ದೇಶಕರು. ಎಸ್‌.ನೊಟ್ಟಾನಿ ನಿರ್ದೇಶನದ ‘ಬಾಲನ್‌’ (1938, ಜನವರಿ 19) ಮೊದಲ ಮಲಯಾಳಂ ಟಾಕಿ ಸಿನಿಮಾ.

  • ದಕ್ಷಿಣ ಭಾರತದ ಮೊದಲ ಮೂಕಿ ಸಿನಿಮಾ ‘ಕೀಚಕ ವಧಂ’ (1918). ಆರ್.ನಟರಾಜ ಮುದಲಿಯಾರ್ ನಿರ್ಮಾಣ, ನಿರ್ದೇಶನದ ಈ ಚಿತ್ರ ಸಂಪೂರ್ಣ ದಕ್ಷಿಣದ ತಂತ್ರಜ್ಞರು ಮತ್ತು ಕಲಾವಿದರ ಪ್ರಯೋಗ. ಮಹಾಭಾರತದ ವಿರಾಟ ಪರ್ವ ಆಧರಿಸಿದ ಕಥಾನಕ. ರಾಜು ಮುದಲಿಯಾರ್‌ ಮತ್ತು ಜೀವರತ್ನಂ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.
  • 1937ರಲ್ಲಿ ತೆರೆಕಂಡ ‘ಬಾಲಯೋಗಿನಿ’ ದಕ್ಷಿಣ ಭಾರತದ ಮೊದಲ ಮಕ್ಕಳ ಸಿನಿಮಾ.
  • ಎ.ವಿ.ಮೇಯಪ್ಪನ್‌  ‘ಹರಿಶ್ಚಂದ್ರ’ (1943) ಕನ್ನಡ ಚಿತ್ರವನ್ನು ತಮಿಳಿಗೆ ಡಬ್ ಮಾಡುವ ಮೂಲಕ ಡಬ್ಬಿಂಗ್‌ ಟ್ರೆಂಡ್‌ಗೆ ಚಾಲನೆ ನೀಡಿದರು.
  • ದಕ್ಷಿಣ ಭಾರತದ ಮೊದಲ ಸಿನಿಮಾ ಸ್ಕೂಲ್‌ – ದಿ ಮದ್ರಾಸ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ (1945).

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ