ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ಎಸ್.ಮಾಲತಿ ನಿರ್ದೇಶನದ ‘ಮೀಡಿಯಾ’ (1982) ನಾಟಕದಲ್ಲಿ ಕಲಾವಿದರಾದ ಬಿ.ಜಯಶ್ರೀ, ನಾಗೇಂದ್ರ ಶಾನ್ ಮತ್ತಿತರರು. ಯುರಿಪಿಡಿಸ್‌ನ ‘ಮೀಡಿಯಾ’ ಗ್ರೀಕ್ ರಂಗಭೂಮಿಯ ಮಹತ್ವದ ನಾಟಕ. ಸಾಹಿತಿ ಕೆ.ಮರುಳಸಿದ್ದಯ್ಯ ಅವರು ಈ ನಾಟಕವನ್ನು ಕನ್ನಡೀಕರಿಸಿದ್ದರು. ನಟಿ ಬಿ.ಜಯಶ್ರೀ ಅವರ ‘ಸ್ಪಂದನ’ ತಂಡದ ಪ್ರಮುಖ ನಾಟಕವಿದು. ಬಿ.ಜಯಶ್ರೀ ಅವರು ಈ ನಾಟಕದ ಶೀರ್ಷಿಕೆ ಪಾತ್ರದಲ್ಲಿದ್ದರೆ, ನಾಗೇಂದ್ರ ಶಾನ್ ದೂತನ ಪಾತ್ರದಲ್ಲಿ ಅಭಿನಯಿಸಿದ್ದರು. (ಫೋಟೊ ಕೃಪೆ: ನಟ ನಾಗೇಂದ್ರ ಶಾನ್)

ಮೀಡಿಯಾ – ಬಿ.ಜಯಶ್ರೀ
- ಕನ್ನಡ ರಂಗಭೂಮಿ - ಸಿನಿಮಾ
Share this post