‘ಕಾಡು’ (1973) ಸಿನಿಮಾ ಬಿಡುಗಡೆ ದಿನದ ಸಂತೋಷಕೂಟದಲ್ಲಿ ವಿತರಕ ಕೆ.ವಿ.ಗುಪ್ತ, ನಿರ್ಮಾಪಕ ನಾರಾಯಣ, ನಿರ್ದೇಶಕ ಗಿರೀಶ್ ಕಾರ್ನಾಡ್, ನಿರ್ಮಾಪಕ ಲಕ್ಷ್ಮೀಪತಿ, ಛಾಯಾಗ್ರಾಹಕ ಗೋವಿಂದ ನಿಹಲಾನಿ, ಸಾಹಿತಿ ಶ್ರೀಕೃಷ್ಣ ಆಲನಹಳ್ಳಿ. ‘ಕಾಡು’ ಶ್ರೀಕೃಷ್ಣ ಆಲನಹಳ್ಳಿ ಅವರ ಕೃತಿಯನ್ನು ಆಧರಿಸಿದ ಪ್ರಯೋಗ. ಪರಸಂಗದ ಗೆಂಡೆತಿಮ್ಮ, ಭುಜಂಗಯ್ಯನ ದಶಾವತಾರಗಳು, ಫೀನಿಕ್ಸ್, ಕುರುಬರ ಲಕ್ಕನೂ ಎಲಿಜಬತ್ ರಾಣಿಯೂ, ಗೀಜಗನ ಗೂಡು…ಅವರ ಕೃತಿಗಳನ್ನು ಆಧರಿಸಿದ ಇನ್ನಿತರೆ ಚಿತ್ರಗಳು. ಇಂದು ಶ್ರೀಕೃಷ್ಣ ಆಲನಹಳ್ಳಿ (03/04/1947 – 04/01/1989) ಅವರ ಜನ್ಮದಿನ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಕಾಡು – ಶ್ರೀಕೃಷ್ಣ ಆಲನಹಳ್ಳಿ
- ಕನ್ನಡ ಸಿನಿಮಾ
Share this post