ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಂಸಾರದಲ್ಲಿ ಸರಿಗಮ

ಸರಿಗಮ ವಿಜಿ ಅವರ ರಚನೆ ಮತ್ತು ನಿರ್ದೇಶನದ ‘ಸಂಸಾರದಲ್ಲಿ ಸರಿಗಮ’ ಜನಪ್ರಿಯ ನಾಟಕದಲ್ಲಿ ಎನ್‌.ಬಿ.ಜಯಪ್ರಕಾಶ್‌ ಮತ್ತು ಸುನಂದಾ. ಯಶಸ್ವೀ ಕಲಾವಿದರು ತಂಡದ ‘ಸಂಸಾರದಲ್ಲಿ ಸರಿಗಮ’ ಇಲ್ಲಿಯವರೆಗೆ ಸಾವಿರಕ್ಕೂ ಮೀರಿ ಪ್ರದರ್ಶನ ಕಂಡಿದೆ. ನಟ ಎನ್‌.ಬಿ.ಜಯಪ್ರಕಾಶ್ ಅವರು ‘ಅಯ್ಯಂಗಾರ್‌’ ಪಾತ್ರಧಾರಿಯಾಗಿ ಸುಮಾರು 450ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ‘ಸ್ಟೆಲ್ಲಾ’ ಪಾತ್ರದಲ್ಲಿ ನಟಿಸಿದ್ದ ಸುನಂದಾ ಅವರು ಕೇಂದ್ರ ಸರ್ಕಾರಿ ನೌಕರರು. ರಾಜ್ಯಮಟ್ಟದ ವಾಲಿಬಾಲ್ ಆಟಗಾರ್ತಿಯೂ ಆಗಿದ್ದ ಅವರು 90ರ ದಶಕದಲ್ಲಿ ರಂಗಭೂಮಿಯಲ್ಲೂ ಸಕ್ರಿಯರಾಗಿದ್ದರು. ಉದಯ ನ್ಯೂಸ್‌ ವಾಹಿನಿಯಲ್ಲಿ ಕೆಲವು ವರ್ಷ ವಾರ್ತಾ ವಾಚಕಿಯಾಗಿದ್ದರು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು