ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಜಾನಿ ವಾಕರ್ ನೆನಪು

‘ಛೂ ಮಂತರ್‌’ (1956) ಹಿಂದಿ ಚಿತ್ರದಲ್ಲಿ ಶ್ಯಾಮಾ, ಜಾನಿ ವಾಕರ್‌. ಬದ್ರುದ್ದೀನ್‌ ಜಮಾಲುದ್ದೀನ್‌ ಕಾಝಿ ಹೆಸರಿನ ನಟ ಹಿಂದಿ ಸಿನಿಪ್ರೇಕ್ಷಕರಿಗೆ ‘ಜಾನಿ ವಾಕರ್‌’ ಎಂದೇ ಪರಿಚಿತರು. ಗುರುದತ್ ನಿರ್ದೇಶನದ ‘ಬಾಝಿ’ (1951) ಹಿಂದಿ ಚಿತ್ರದಲ್ಲಿ ಅವರು ಕುಡುಕನ ಪಾತ್ರ ನಿರ್ವಹಿಸಿದ್ದರು. ಈ ಪಾತ್ರದಿಂದ ಪ್ರಭಾವಿತರಾದ ಗುರುದತ್ ಮಾದಕ ಪಾನೀಯದ ಜನಪ್ರಿಯ ಬ್ರ್ಯಾಂಡ್‌ವೊಂದರ ಹೆಸರಿನಿಂದ (ಜಾನಿ ವಾಕರ್‌) ಬದ್ರುದ್ದೀನ್‌ ಅವರನ್ನು ಕರೆದರು. ಕಂಡಕ್ಟರ್ ವೃತ್ತಿ ಮಾಡುತ್ತಿದ್ದ ಜಾನಿ ವಾಕರ್‌ ತಮ್ಮ ಪ್ರತಿಭೆ, ಪರಿಶ್ರಮದಿಂದ ಹಿಂದಿ ಚಿತ್ರರಂಗದ ಜನಪ್ರಿಯ ಹಾಸ್ಯನಟನಾಗಿ ಹೆಸರು ಮಾಡಿದವರು. ಹಿಂದಿ ಚಿತ್ರರಂಗದ ಎರಡು ತಲೆಮಾರಿನ ಬಹುತೇಕ ಎಲ್ಲಾ ನಾಯಕನಟರ 270ಕ್ಕೂ ಹೆಚ್ಚು ಚಿತ್ರಗಳಲ್ಲಿ ಜಾನಿ ವಾಕರ್ ಅಭಿನಯಿಸಿದ್ದಾರೆ. (Photo Courtesy: Film History Pics)

Share this post