ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟಿ ಕಾನನ್ ದೇವಿ ನೆನಪು

‘ಜವಾಬ್‌’ (1942) ಹಿಂದಿ ಚಿತ್ರದಲ್ಲಿ ಕಾನನ್ ದೇವಿ ಮತ್ತು ಪಿ.ಸಿ.ಬರುವಾ. ಬೆಂಗಾಲಿ ಮತ್ತು ಹಿಂದಿ ಸಿನಿಮಾಗಳ ಜನಪ್ರಿಯ ನಾಯನಟಿ ಕಾನನ್ ದೇವಿ. ‘ಜೈದೇವ್‌’ (1926) ಮೂಕಿ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದಾಗ ಅವರಿಗೆ ಹತ್ತು ವರ್ಷ. ಸಾಲು ಸಾಲು ಮೂಕಿ ಚಿತ್ರಗಳಲ್ಲಿ ನಟಿಸಿದ ಅವರಿಗೆ ಮುಂದೆ ಟಾಕಿ ಸಿನಿಮಾಗಳಲ್ಲೂ ದೊಡ್ಡ ಯಶಸ್ಸು ಸಿಕ್ಕಿತು. ಉತ್ತಮ ಗಾಯಕಿಯೂ ಆದ ಅವರು ಬೆಂಗಾಲಿ ಸಿನಿಮಾದ ಅತ್ಯಂತ ಜನಪ್ರಿಯ ತಾರೆ ಎನಿಸಿಕೊಂಡರು. ಕಾನನ್ ದೇವಿ (22/04/1916 – 17/07/1992) ಅವರಿಗೆ ಪದ್ಮಶ್ರೀ, ದಾದಾ ಸಾಹೇಬ್ ಫಾಲ್ಕೆ ಗೌರವ ಸಂದಿದೆ. (Photo Courtesy: Film History Pics)

Share this post