ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಎಂ.ಪಿ.ಶಂಕರ್ – ಗೀತಪ್ರಿಯ

ಸಹಾಯಾರ್ಥ ಕಾರ್ಯಕ್ರಮವೊಂದರ ಸಂದರ್ಭ. ನಾಟಕದ ಪೋಷಾಕಿನಲ್ಲಿ ನಟ, ನಿರ್ಮಾಪಕ ಎಂ.ಪಿ.ಶಂಕರ್‌ ಮತ್ತು ನಿರ್ದೇಶಕ ಗೀತಪ್ರಿಯ ಅವರು ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಎಂ.ಪಿ.ಶಂಕರ್‌ ಅರಣ್ಯ, ವನ್ಯಜೀವಿ ಹಿತರಕ್ಷಣೆ ಕುರಿತು ಕಳಕಳಿಯಿದ್ದ ವ್ಯಕ್ತಿ. ಹಾಗಾಗಿ ತಮ್ಮ ‘ಭರಣಿ ಚಿತ್ರ’ ಬ್ಯಾನರ್‌ನಡಿ ಪರಿಸರಕ್ಕೆ ಸಂಬಂಧಿಸಿದ ಸಿನಿಮಾಗಳನ್ನು ನಿರ್ಮಿಸಿದರು. ಬೂತಯ್ಯನ ಮಗ ಅಯ್ಯು, ನಾಗರಹಾವು, ಗಂಧದ ಗುಡಿ, ದೂರದ ಬೆಟ್ಟ, ಭೂಲೋಕದಲ್ಲಿ ಯಮರಾಜ… ಅವರಿಗೆ ಜನಪ್ರಿಯತೆ ತಂದುಕೊಟ್ಟ ಕೆಲವು ಚಿತ್ರಗಳು. ಇಂದು (ಜುಲೈ 17) ಎಂ.ಪಿ.ಶಂಕರ್‌ (20/08/1935  – 17/07/2008) ಅಗಲಿದ ದಿನ.

Share this post