ಕನ್ನಡ ಚಿತ್ರರಂಗ ಕಂಡ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಸಿನಿಮಾ ಮಾಧ್ಯಮದ ಬಗ್ಗೆ ಅಗಾಧ ಹಿಡಿತ ಹೊಂದಿದ್ದ ತಂತ್ರಜ್ಞ. ತಮ್ಮ ಸಿನಿಮಾಗಳ ಮೂಲಕ ಹಿಂದಿ ಹಾಗೂ ದಕ್ಷಿಣ ಭಾರತದ ಚಿತ್ರರಂಗಗಳ ತಂತ್ರಜ್ಞರು ಹಾಗೂ ಕಲಾವಿದರನ್ನು ಕನ್ನಡದತ್ತ ಸೆಳೆದಿದ್ದರು. ಅವರು ನಿರ್ದೇಶಿಸಿದ ಒಟ್ಟು ಸಿನಿಮಾಗಳು 37. ಈ ಪಟ್ಟಿಯಲ್ಲಿ ಮಲಯಾಳಂ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳೂ ಇವೆ. ಪುಟ್ಟಣ್ಣ ನಿರ್ದೇಶಿಸಿದ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.