ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕಲಾಕೇಸರಿ ಉದಯ ಕುಮಾರ್

Share this post
ಕನ್ನಡ ಚಿತ್ರರಂಗದ ಕುಮಾರತ್ರಯರಲ್ಲೊಬ್ಬರು ನಟ ಉದಯ ಕುಮಾರ್. ಆನೇಕಲ್ ಮೂಲದ ಉದಯ ಕುಮಾರ್ ನಟನಾಗಿದ್ದು ಆಕಸ್ಮಿಕ. ಅವರ ಜನ್ಮನಾಮ ಸೂರ್ಯನಾರಾಯಣ ಮೂರ್ತಿ. `ಉದಯ ಕುಮಾರ್’ ಎಂದು ಕರೆದದ್ದು ಚಿತ್ರಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳು. `ಭಾಗ್ಯೋದಯ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಉದಯಕುಮಾರ್ 193 ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪಟ್ಟಿಯಲ್ಲಿ 171 ಕನ್ನಡ, 15 ತೆಲುಗು, 6 ತಮಿಳು ಮತ್ತು 1 ಹಿಂದಿ ಚಿತ್ರ ಸೇರಿದೆ. ಉದಯ ಕುಮಾರ್ ಕುರಿತು ಸಂಕ್ಷಿಪ್ತ ಪರಿಚಯ ನೀಡುವ ವೀಡಿಯೋ ಇದು. ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರು ಸೆರೆಹಿಡಿದ ಆಕರ್ಷಕ ಫೋಟೋಗಳು ವೀಡಿಯೋದಲ್ಲಿವೆ.