ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಿದ್ದಲಿಂಗಯ್ಯನವರ ಬಯೋಪಿಕ್ ಆಗಬೇಕು…

ಪೋಸ್ಟ್ ಶೇರ್ ಮಾಡಿ

(ಬರಹ – ಫೋಟೊಗಳು: ಪ್ರಗತಿ ಅಶ್ವತ್ಥ ನಾರಾಯಣ, ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ)


ನಿರ್ದೇಶಕ ಸಿದ್ದಲಿಂಗಯ್ಯನವರು ತೀರ ಸರಳಜೀವಿ. ಯಾವುದೇ ಆಡಂಬರ, ಪ್ರಚಾರಗಳಿಂದ ದೂರ ಉಳಿದವರು. ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಸಿದ್ದಲಿಂಗಯ್ಯನವರು ಚಿಕ್ಕಂದಿನಿಂದಲೇ ಸಿನಿಮಾ ಮೇಲಿನ ಪ್ರೀತಿಯಿಂದ ಬಹು ಕಷ್ಟಪಟ್ಟು ಮೇಲೆ ಬಂದವರು. ಚಿತ್ರೀಕರಣದ ಬಿಡುವಿನ ವೇಳೆ ಅಥವಾ ಕಾರಿನಲ್ಲಿ ಪ್ರಯಾಣದ ವೇಳೆ ನಮಗೆ ಅವರು ಬೆಳೆದು ಬಂದ ದಾರಿಯನ್ನು ಹೇಳುತ್ತಿದ್ದರು.

ಬಹು ರೋಚಕವಾದ ಅವರ ಜೀವನಗಾಥೆ ಹಲವಾರು ಮಂದಿಗೆ ದಾರಿ ದೀಪವಾಗಬಹುದು. ಅವರ ಆತ್ಮ ಚರಿತ್ರೆಯ ಶೂಟಿಂಗ್‌ ಸ್ಕ್ರಿಪ್ಟ್‌ ಸಿದ್ದಪಡಿಸಿದ್ದರು. ಅದನ್ನು ಅವರೇ ಸಿನಿಮಾ ಮಾಡುವ ಉದ್ದೇಶವಿತ್ತು. ಇತ್ತೀಚೆಗೆ ಬಹಳಷ್ಟು ‘ಬಯೋಪಿಕ್’ ಸಿನಿಮಾ ಬರುತ್ತಿವೆ. ಸಿದ್ದಲಿಂಗಯ್ಯನವರ ಬಯೋಪಿಕ್ ಚಿತ್ರ ಅದರೆ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಆಸಕ್ತರಾಗಿರುವ ಯುವಕರಿಗೆ ಅನುಕೂಲವಾಗಬಹುದು.

ಸಿದ್ದಲಿಂಗಯ್ಯನವರ ಮನೆಗೆ ನಾನು ಅಗಾಗ್ಗೆ ಹೋಗುತ್ತಿದ್ದೆ. ಬಹಳಷ್ಟು ದಿನವಾದರೆ ಅವರೆ ಫೋನ್ ಮಾಡಿ ಬರಲು ಹೇಳುತ್ತಿದ್ದರು. ಹಾಗೆ ಹೋದಾಗ ಊಟ ಮಾಡಿಸಿಯೆ ಕಳುಹಿಸುತ್ತಿದ್ದರು. ಒಮ್ಮೆ ಅವರ ಮನೆಗೆ ಹೋದಾಗ ಅವರಿಗೆ ಸಂದ ಪ್ರಶಸ್ತಿಗಳು, ಪಾರಿತೋಷಕಗಳನ್ನೆಲ್ಲ ಒಂದೆಡೆ ಸೇರಿಸಿ ಒಂದು ಪೋಟೋ ತೆಗೆಯಬೇಕೆಂದು ಅವರ ಮಗಳು ಶಾಂತಿ, ಕಿರಿಯ ಮಗ ಸುರೇಶ್ ರವರ ಸಹಕಾರದಿಂದ ಪೋಟೋ ತೆಗೆದೆ. ಅವರಿಗೆ ಈ ರೀತಿಯ ತೋರಿಕೆ, ಪ್ರಚಾರ ಸ್ವಲ್ಪವೂ ಇಷ್ಟ ಇರಲಿಲ್ಲ. ನಮ್ಮಗಳ ಬಲವಂತಕ್ಕೆ ಒಪ್ಪಿಕೊಂಡರು. ಅವರ 15 ಚಿತ್ರಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕನಾಗಿ ಕೆಲಸಮಾಡಿದ ದನ್ಯತೆ ನನ್ನದು.

ಈ ಬರಹಗಳನ್ನೂ ಓದಿ