ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಬಹುದೊಡ್ಡ ಹೋರಾಟ ಗೋಕಾಕ್ ಚಳುವಳಿ. ಭಾಷಾ ನೀತಿಯಲ್ಲಿ ಕನ್ನಡಕ್ಕೆ ಮೊದಲ ಆಧ್ಯತೆ ಸಿಗಬೇಕೆನ್ನುವ ಹೋರಾಟವನ್ನು ಆರಂಭದಲ್ಲಿ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ವರನಟ ಡಾ.ರಾಜಕುಮಾರ್ ನೇತೃತ್ವ ವಹಿಸುತ್ತಿದ್ದಂತೆ ಚಳುವಳಿಗೆ ಹೊಸ ರೂಪು ಸಿಕ್ಕಿತು. ರಾಜ್ ಅವರೊಂದಿಗೆ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದರು. ಗೋಕಾಕ್ ಚಳವಳಿ ಅಂಗವಾಗಿ ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಮಾವೇಶ ನಡೆದಿತ್ತು. ಇದಕ್ಕೆ ಸಾಕ್ಷಿಯಾದ ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರು ತಮ್ಮ ಫೋಟೋಗಳೊಂದಿಗೆ ಅಂದಿನ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.