ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕಲೋಪಾಸಕರು – ಪತ್ರಕರ್ತ ಹಾ.ವೆಂ.ಸೀತಾರಾಮಯ್ಯ ನೆನಪು

ಪೋಸ್ಟ್ ಶೇರ್ ಮಾಡಿ

ಈ ಫೋಟೋದಲ್ಲಿ ನಟ ಅಶ್ವತ್ಥ್ ಅವರೊಂದಿಗಿರುವವರು ಪತ್ರಕರ್ತ ಹಾ.ವೆಂ.ಸೀತಾರಾಮಯ್ಯನವರು. ವೃತ್ತಿಯ ಬಹುಪಾಲು ಅವಧಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಣೆ. ರಂಗಭೂಮಿ ಮತ್ತು ಸಿನಿಮಾ ರಂಗದ ಪೋಷಕ ಕಲಾವಿದರ ಬಗ್ಗೆ ಅವರಿಗೆ ವಿಶೇಷ ಆಸ್ಥೆ. ಎಲ್ಲೋ ದೂರದ ಹಳ್ಳಿಗಳಲ್ಲಿರುವ ಕಲಾವಿದರನ್ನು ಹುಡುಕಿಕೊಂಡು ಹೋಗಿ ಮಾತನಾಡಿಸಿ ವ್ಯಕ್ತಿಚಿತ್ರಗಳನ್ನು ದಾಖಲಿಸಿದ್ದಾರೆ. ಅವರ ಕಾಳಜಿಯಿಂದಾಗಿ ಅಜ್ಞಾತ ರಂಗಭೂಮಿ ಕಲಾವಿದರ ವ್ಯಕ್ತಿಚಿತ್ರಗಳು ದಾಖಲಾಗಿವೆ.

‘ಭಾನುವಾರ ಸ್ಟುಡಿಯೋ ರಜೆ ಇದ್ದಾಗ ಹಾ.ವೆಂ.ಸೀ ನನ್ನನ್ನು ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು. ಇಬ್ಬರೂ ಬಸ್‍ನಲ್ಲಿ ನೂರಾರು ಕಿಲೋ ಮೀಟರ್ ದೂರದ ಕುಗ್ರಾಮಗಳಿಗೆ ಹೋಗುತ್ತಿದ್ದೆವು. ಅಲ್ಲಿ ಅವರು ನಾಟಕ ಕಲಾವಿದನನ್ನು ಮಾತನಾಡಿಸುತ್ತಿದ್ದರು. ನಾನು ಒಂದೆರಡು ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದೆ. ಅನುಕೂಲಗಳಿಲ್ಲದ ಆ ದಿನಗಳಲ್ಲಿ ಒಂದು ಫೋಟೋಗಾಗಿ ಇಡೀ ದಿನವನ್ನೇ ವ್ಯಯಿಸಬೇಕಾಗಿದ್ದ ಸಂದರ್ಭಗಳವು. ಹಾ.ವೆಂ.ಸೀ ಈಗ ನಮ್ಮೊಂದಿಗಿಲ್ಲ. ಆದರೆ ಕಲಾವಿದರ ಕುರಿತ ಅವರ ಪುಸ್ತಕಗಳು ದಾಖಲೆಗಳಾಗಿ ಉಳಿದಿವೆ’ ಎನ್ನುತ್ತಾರೆ ಪ್ರಗತಿ ಅಶ್ವತ್ಥ ನಾರಾಯಣ.

ಇನ್ನಷ್ಟು ಕಥೆ

ಹೆಳವನಕಟ್ಟೆ ಗಿರಿಯಮ್ಮ

ಸಂಕೇತ್ ಸ್ಟುಡಿಯೋದಲ್ಲಿ ‘ಹೆಳವನಕಟ್ಟೆ ಗಿರಿಯಮ್ಮ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಪಿಬಿಎಸ್ ಜೊತೆ

ಮೂವಿಂಗ್ ಶಾಟ್!

ಈಗ ಸಿನಿಮಾ, ಕಿರುತೆರೆ ಚಿತ್ರೀಕರಣಗಳಲ್ಲಿ ಜಿಮ್ಮೀ ಜಿಬ್ ಸೇರಿದಂತೆ ಆಧುನಿಕ ಪರಿಕರಗಳಿಂದ ಮೂವಿಂಗ್‌

ಕನ್ನಯ್ಯರಾಮ – ಅನಂತನಾಗ್‌

ಆಗಿನ್ನೂ ಅನಂತನಾಗ್ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿರಲಿಲ್ಲ. ‘ಅಂಕುರ್’, ‘ನಿಶಾಂತ್’, ‘ಮಂಥನ್’ ಹಿಂದಿ ಸಿನಿಮಾಗಳು

ಜನಪ್ರಿಯ ಪೋಸ್ಟ್ ಗಳು

ಹೆಳವನಕಟ್ಟೆ ಗಿರಿಯಮ್ಮ

ಸಂಕೇತ್ ಸ್ಟುಡಿಯೋದಲ್ಲಿ ‘ಹೆಳವನಕಟ್ಟೆ ಗಿರಿಯಮ್ಮ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಪಿಬಿಎಸ್ ಜೊತೆ ರಾಜಕುಮಾರ್ ಮತ್ತು ರಾಜ್ ಸಹೋದರ, ನಿರ್ಮಾಪಕ

ಮೂವಿಂಗ್ ಶಾಟ್!

ಈಗ ಸಿನಿಮಾ, ಕಿರುತೆರೆ ಚಿತ್ರೀಕರಣಗಳಲ್ಲಿ ಜಿಮ್ಮೀ ಜಿಬ್ ಸೇರಿದಂತೆ ಆಧುನಿಕ ಪರಿಕರಗಳಿಂದ ಮೂವಿಂಗ್‌ -ಏರಿಯಲ್ ಶಾಟ್‌ಗಳನ್ನು ಚಿತ್ರಿಸುತ್ತಾರೆ. ಸೌಲಭ್ಯಗಳಿಲ್ಲದ ಆಗ