ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

‘ಬಿಳಿ ಹೆಂಡ್ತಿ’ ಮಾರ್ಗರೆಟ್

ಪೋಸ್ಟ್ ಶೇರ್ ಮಾಡಿ

ಅಮೆರಿಕ ಮೂಲದ ಮಾರ್ಗರೆಟ್ ಥಾಮ್ಸನ್ ‘ಬಿಳಿ ಹೆಂಡ್ತಿ’ ಚಿತ್ರಕ್ಕೆ ಆಯ್ಕೆಯಾದದ್ದು ಆಕಸ್ಮಿಕ. ಹದಿನೆಂಟರ ಹರೆಯದ ಮಾರ್ಗರೆಟ್ ಆಗ ‘ಭಾರತದ ಗ್ರಾಮೀಣ ಬದುಕು’ ವಿಷಯದಲ್ಲಿ ಇಂಟರ್ನ್‌ಶಿಪ್‌ ಮಾಡಲು ಭಾರತಕ್ಕೆ ಬಂದಿದ್ದರಂತೆ. ನಟ, ನಿರ್ಮಾಪಕ ಶೃಂಗಾರ್ ನಾಗರಾಜ್ (ನಟ ರಾಮಕುಮಾರ್‌ ತಂದೆ) ಆಗ ಫಾರಿನ್ ಟ್ರಾವೆಲ್ ಏಜನ್ಸಿಯೊಂದನ್ನು ನಡೆಸುತ್ತಿದ್ದರು. ಪುಟ್ಟಣ್ಣನವರು ತಮ್ಮ ಚಿತ್ರಕ್ಕೆ ವಿದೇಶಿ ಯುವತಿಯನ್ನು ಹುಡುಕುತ್ತಿದ್ದುದು ಶೃಂಗಾರ್ ನಾಗರಾಜ್ ಅವರಿಗೆ ತಿಳಿದಿತ್ತು. ತಮ್ಮ ಗಮನಕ್ಕೆ ಬಂದ ಮಾರ್ಗರೆಟ್‌ರನ್ನು ಅವರು ಪುಟ್ಟಣ್ಣನವರಿಗೆ ಪರಿಚಯಿಸಿದರು. ಸಿನಿಮಾ ಪಾತ್ರಕ್ಕೆ ಸೂಕ್ತ ರೀತಿಯಲ್ಲಿ ಹೊಂದಿಕೆಯಾಗುವಂತಿದ್ದ ಮಾರ್ಗರೆಟ್‌ರನ್ನು ಪುಟ್ಟಣ್ಣ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು.

ಸಿನಿಮಾ ಬಗ್ಗೆ ಆಸಕ್ತಿ ಇದ್ದ ಮಾರ್ಗರೆಟ್ ‘ಬಿಳಿ ಹೆಂಡ್ತಿ’ಯಾಗಿ ಕ್ಯಾಮೆರಾ ಎದುರಿಸಲು ಒಪ್ಪಿದರು. ಸಿನಿಮಾದಲ್ಲಿ ನಟಿಸಲು ನಿರ್ಧರಿಸುತ್ತಿದ್ದಂತೆ ಮಾರ್ಗರೆಟ್ ತಮ್ಮ ಇಂಟರ್ನ್‌ಶಿಪ್‌ ವಿಷಯವನ್ನು ‘ಭಾರತೀಯ ಸಿನಿಮಾ’ಗೆ ಬದಲಿಸಿಕೊಂಡರಂತೆ. ಅವರು ಭಾರತದಲ್ಲಿದ್ದುದು ಮೂರು ತಿಂಗಳಷ್ಟೆ. ಚಿತ್ರೀಕರಣ ಮುಗಿದ ನಂತರ ಅಮೆರಿಕಕ್ಕೆ ಹೊರಟು ನಿಂತ ಮಾರ್ಗರೆಟ್‌ರಿಗೆ ‘ಬಿಳಿ ಹೆಂಡ್ತಿ’ ಚಿತ್ರತಂಡದಿಂದ ಬೀಳ್ಗೊಡುಗೆ ಸಮಾರಂಭ ಏರ್ಪಾಟಾಗಿತ್ತು.

ಏರ್‌ಲೈನ್ಸ್‌ ಹೋಟೆಲ್‌ನಲ್ಲಿ ನಡೆದ ಸಮಾರಂಭಕ್ಕೆ ಮಾರ್ಗರೆಟ್ ಸೀರೆಯುಟ್ಟು ಬಂದಿದ್ದರು. ಇಲ್ಲಿರೋದು ಆ ಸಂದರ್ಭದ ಫೋಟೋ. ಮಾರ್ಗರೆಟ್ ಜತೆ ನಿರ್ಮಾಪಕ ಮುದ್ದುಕೃಷ್ಣ ಮತ್ತು ನಿರ್ದೇಶಕ ಪುಟ್ಟಣ್ಣ ಇದ್ದಾರೆ. ಸ್ಥಿರಚಿತ್ರ ಛಾಯಾಗ್ರಾಹಕ ಅಶ್ವತ್ಥ್ ಸರ್ ತಾವು ತೆಗೆದು ಕೆಲವು ಅಪರೂಪದ ಫೋಟೋಗಳನ್ನು ಮಾರ್ಗರೆಟ್‌ರಿಗೆ ಕೊಟ್ಟಿದ್ದರಂತೆ. ಅಮೆರಿಕಕ್ಕೆ ಮರಳಿದ ನಂತರ ಮಾರ್ಗರೆಟ್ ಕೃತಜ್ಞತಾಪೂರ್ವಕವಾಗಿ ಅಶ್ವತ್ಥರಿಗೆ ಬರೆದಿದ್ದ ಪತ್ರವೂ ಇಲ್ಲಿದೆ ನೋಡಿ.

ಇನ್ನಷ್ಟು ಕಥೆ

ಹೆಳವನಕಟ್ಟೆ ಗಿರಿಯಮ್ಮ

ಸಂಕೇತ್ ಸ್ಟುಡಿಯೋದಲ್ಲಿ ‘ಹೆಳವನಕಟ್ಟೆ ಗಿರಿಯಮ್ಮ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಪಿಬಿಎಸ್ ಜೊತೆ

ಜನಪ್ರಿಯ ಪೋಸ್ಟ್ ಗಳು

‘ಬಿಳಿ ಹೆಂಡ್ತಿ’ ಮಾರ್ಗರೆಟ್

ಅಮೆರಿಕ ಮೂಲದ ಮಾರ್ಗರೆಟ್ ಥಾಮ್ಸನ್ ‘ಬಿಳಿ ಹೆಂಡ್ತಿ’ ಚಿತ್ರಕ್ಕೆ ಆಯ್ಕೆಯಾದದ್ದು ಆಕಸ್ಮಿಕ. ಹದಿನೆಂಟರ ಹರೆಯದ ಮಾರ್ಗರೆಟ್ ಆಗ ‘ಭಾರತದ ಗ್ರಾಮೀಣ

ಕಲೋಪಾಸಕರು – ಪತ್ರಕರ್ತ ಹಾ.ವೆಂ.ಸೀತಾರಾಮಯ್ಯ ನೆನಪು

ಈ ಫೋಟೋದಲ್ಲಿ ನಟ ಅಶ್ವತ್ಥ್ ಅವರೊಂದಿಗಿರುವವರು ಪತ್ರಕರ್ತ ಹಾ.ವೆಂ.ಸೀತಾರಾಮಯ್ಯನವರು. ವೃತ್ತಿಯ ಬಹುಪಾಲು ಅವಧಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಣೆ. ರಂಗಭೂಮಿ ಮತ್ತು

‘ಗಂಧರ್ವಗಿರಿ’ ಮುಹೂರ್ತ

`ಶಂಕರಾಭರಣಂ’ ತೆಲುಗು ಸಿನಿಮಾ ಖ್ಯಾತಿಯ ನಟ ಸೋಮಯಾಜುಲು ಮುಖ್ಯಪಾತ್ರದಲ್ಲಿ ನಟಿಸಿದ್ದ `ಗಂಧರ್ವಗಿರಿ’ (1983) ಮುಹೂರ್ತದ ಸಂದರ್ಭವಿದು. ಚನ್ನರಾಯಪಟ್ಟಣ ಸಮೀಪದ ನುಗ್ಗೇಹಳ್ಳಿಯ

ರಾಜ್‌ ಅವರಿಗೆ ಕಲರ್ ಷರ್ಟ್ ಹಾಕಿಸಿದ್ದು!

ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಸಿನಿ ಪತ್ರಿಕೆಗಳಿಗೂ ಕಾರ್ಯನಿರ್ವಹಿಸಿದ್ದಾರೆ. ವಿ.ಎನ್.ಸುಬ್ಬರಾವ್ ಸಂಪಾದಕತ್ವದ `ತಾರಾಲೋಕ’ ಪತ್ರಿಕೆಯ ಸಂದರ್ಭವೊಂದು ಅವರ