ಆಗಿನ್ನೂ ಅನಂತನಾಗ್ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿರಲಿಲ್ಲ. ‘ಅಂಕುರ್’, ‘ನಿಶಾಂತ್’, ‘ಮಂಥನ್’ ಹಿಂದಿ ಸಿನಿಮಾಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು. ‘ಸಂಕಲ್ಪ’, ‘ದೇವರಕಣ್ಣು’, ‘ಹಂಸಗೀತೆ’ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದರು. ‘ಬಯಲು ದಾರಿ’ ಇನ್ನೂ ತೆರೆಕಂಡಿರಲಿಲ್ಲ. ಮುಂಬಯಿ-ಬೆಂಗಳೂರೆಂದು ಓಡಾಡಿಕೊಂಡಿದ್ದ ಅವರು ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರಂತೆ. ಆಗೊಂದು ದಿನ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ‘ಮೇನಕಾ’ ಸಿನಿಪತ್ರಿಕೆಗೆಂದು ಅನಂತ್ ಫೋಟೋ ಕ್ಲಿಕ್ಕಿಸಲು ವುಡ್‌ಲ್ಯಾಂಡ್ಸ್‌ಗೆ ಹೋಗಿದ್ದರಂತೆ(1976). ಆಗ ಅನಂತ್ ‘ಕನ್ನೇಶ್ವರ ರಾಮ’ ಸಿನಿಮಾಗಾಗಿ ತಯಾರಿ ನಡೆಸಿದ್ದರು. ಎಸ್.ಕೆ.ನಾಡಿಗ್‌ರ ‘ಕನ್ನಯ್ಯರಾಮ’ ಕಾದಂಬರಿ ಆಧರಿಸಿ ಎಂ.ಎಸ್.ಸತ್ಯು ನಿರ್ದೇಶಿಸಿದ್ದ ಚಿತ್ರವಿದು. ಬಿ.ವಿ.ಕಾರಂತರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ಶಬಾನಾ ಅಜ್ಮಿ, ಅಮೋಲ್ ಪಾಲೇಕರ್ ಮತ್ತಿತರರು ನಟಿಸಿದ್ದ ಚಿತ್ರ ಕನ್ನಡ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿತ್ತು. ಹೋಟೆಲ್‌ನ ಕೋಣೆಯಲ್ಲಿ ವಿವಿದ ಭಂಗಿಗಳಲ್ಲಿ ಅನಂತ್‌ರ ಫೋಟೋ ಕ್ಲಿಕ್ಕಿಸಿಕೊಂಡ ಅಶ್ವತ್ಥರು ‘ಕನ್ನಯ್ಯರಾಮ’ ಕಾದಂಬರಿ ಓದುವ ಅನಂತ್‌ರನ್ನೂ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು.

ಆರ್ಎನ್ಜೆ – ಚಿ.ಉದಯಶಂಕರ್ – ವಿಜಯನಾರಸಿಂಹ
(ಫೋಟೊ – ಬರಹ: ಎನ್.ಎಸ್.ಶ್ರೀಧರಮೂರ್ತಿ) ಕನ್ನಡ ಚಿತ್ರಗೀತೆಗಳ ‘ರತ್ನತ್ರಯರು’ ಎಂದೇ ಕರೆಯಬಹುದಾದ ಆರ್.ಎನ್.ಜಯಗೋಪಾಲ್,