ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟ ಉತ್ತಮ್ ಕುಮಾರ್ ನೆನಪು

ಅಜೊಯ್ ಕಾರ್ ನಿರ್ದೇಶನದ ‘ಸಪ್ತಪದಿ’ (1961) ಬೆಂಗಾಲಿ ಚಿತ್ರದಲ್ಲಿ ಉತ್ತಮ್ ಕುಮಾರ್ ಮತ್ತು ಸುಚಿತ್ರಾ ಸೇನ್‌. ‘ಮಹಾನಾಯಕ್‌’ ಎಂದೇ ಕರೆಸಿಕೊಂಡಿದ್ದ ಬೆಂಗಾಲಿ ಚಿತ್ರರಂಗದ ಜನಪ್ರಿಯ ನಾಯಕನಟ ಉತ್ತಮ್ ಕುಮಾರ್‌. ಚಿತ್ರನಿರ್ದೇಶಕ, ನಿರ್ಮಾಪಕ, ಗಾಯಕರೂ ಹೌದು. ನಟಿ ಸುಚಿತ್ರಾ ಸೇನ್‌ ಜೊತೆ ಅವರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದು, ಇವರಿಬ್ಬರದ್ದು ಬಹುಜನಪ್ರಿಯ ಜೋಡಿ. 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಉತ್ತಮ್ ಕುಮಾರ್ ಅಭಿನಯಿಸಿದ್ದಾರೆ. ಹರಾನೋ ಸುರ್‌, ಜಿಂದರ್ ಬಂದಿ, ಸೇಶ್ ಅಂಕ, ದೇಯಾ ನೇಯಾ, ನಾಯಕ್‌, ಆಂಟೋನಿ ಫಿರಿಂಗಿ, ಅಮಾನುಷ್‌, ಬಾಘ್‌ ಬೊಂಡಿ ಖೇಲಾ, ಚಿರಿಯಾಖಾನ ಅವರ ಕೆಲವು ಜನಪ್ರಿಯ ಬೆಂಗಾಲಿ ಸಿನಿಮಾಗಳು. ಇಂದು ಉತ್ತಮ್‌ ಕುಮಾರ್‌ (03/09/1926 – 24/07/1980) ಜನ್ಮದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು