ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅನಂತನಾಗ್ – 73

ಎಂ.ಎಸ್‌.ಸತ್ಯು ನಿರ್ದೇಶನದ ‘ಬರ’ (1982) ಚಿತ್ರದಲ್ಲಿ ಅನಂತನಾಗ್‌. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ಅವರ ಕೃತಿಯನ್ನು ಆಧರಿಸಿದ ಪ್ರಯೋಗ. ಈ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ರಾಷ್ಟ್ರಪ್ರಶಸ್ತಿ, ಅತ್ಯುತ್ತಮ ಸಿನಿಮಾ ರಾಜ್ಯಪ್ರಶಸ್ತಿ ಸಂದಿದೆ. ಭಾರತೀಯ ಸಿನಿಮಾ ಕಂಡ ಪ್ರಮುಖ ನಟರಲ್ಲೊಬ್ಬರು ಅನಂತನಾಗ್‌. ಕನ್ನಡ ಮತ್ತು ಹಿಂದಿ ಚಿತ್ರರಂಗದ ಹೊಸಅಲೆಯ ಸಿನಿಮಾಗಳ ಯಾದಿಯಲ್ಲಿ ಅವರ ಹೆಸರು ಮುಂಚೂಣಿಯಲ್ಲಿ ಪ್ರಸ್ತಾಪವಾಗುತ್ತದೆ. ಪ್ರಮುಖವಾಗಿ ಕನ್ನಡ ಸೇರಿದಂತೆ ಹಿಂದಿ, ಮರಾಠಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಂದು (ಸೆಪ್ಟೆಂಬರ್‌ 04) ಅನಂತನಾಗ್‌ ಅವರ 73ನೇ ಹುಟ್ಟುಹಬ್ಬ. (ಫೋಟೊ: ಖ್ಯಾತ ಸ್ಥಿರಚಿತ್ರ ಛಾಯಾಗ್ರಾಹಕ ಗುಲಾಮ್‌ ಮುಂತಕಾ)

Share this post