‘ಆದಿ ಶಂಕರಾಚಾರ್ಯ’ (1983) ಸಂಸ್ಕೃತ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಜಿ.ವಿ.ಅಯ್ಯರ್. ಅವರ ತೊಡೆಯ ಮೇಲೆ ಕೃಷ್ಣನ ವೇಷದಲ್ಲಿ ಕುಳಿತಿರುವವರು ಬಾಲನಟಿ ಮಾಳವಿಕ. 8ನೇ ಶತಮಾನದ ತತ್ವಜ್ಞಾನಿ ಶಂಕರಾಚಾರ್ಯರ ಕುರಿತ ಈ ಪ್ರಯೋಗಕ್ಕೆ ಭಾರತದ ಮೊದಲ ಸಂಸ್ಕೃತ ಸಿನಿಮಾ ಎನ್ನುವ ಹೆಗ್ಗಳಿಕೆ ಇದೆ. ಪ್ರಯೋಗಶೀಲ ವ್ಯಕ್ತಿತ್ವದ ಜಿ.ವಿ.ಅಯ್ಯರ್ ಕನ್ನಡ ಸಿನಿಮಾ ಕಂಡ ಪ್ರಮುಖ ಚಿತ್ರಸಾಹಿತಿ, ನಿರ್ದೇಶಕ. ಮೂಲತಃ ರಂಗಭೂಮಿ ನಟರಾದ ಅವರು ‘ರಾಧಾರಮಣ’ (1944) ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದರು. ‘ಸೋದರಿ’ (1955) ಚಿತ್ರಕ್ಕೆ ಸಂಭಾಷಣೆ, ಹಾಡುಗಳನ್ನು ರಚಿಸಿದರು. ‘ಭೂದಾನ’ ನಿರ್ದೇಶನದ ಮೊದಲ ಸಿನಿಮಾ. ಹತ್ತಾರು ಚಿತ್ರಗಳಿಗೆ ಸಾಹಿತ್ಯ ರಚಿಸಿದರುವ ಅಯ್ಯರ್ 20 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇಂದು ಜಿ.ವಿ.ಅಯ್ಯರ್ (03/09/1917 – 21/12/2003) ಜನ್ಮದಿನ. (Photo Courtesy: Malavika Avinash)

ಶಂಕರಾಚಾರ್ಯ – ಜಿ.ವಿ.ಅಯ್ಯರ್
- ಸಂಸ್ಕೃತ ಸಿನಿಮಾ
Share this post