ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಎಂ.ಎನ್‌.ಲಕ್ಷ್ಮೀದೇವಿ

ಎನ್‌.ಸಿ.ರಾಜನ್‌ ನಿರ್ದೇಶನದ ‘ಇಮ್ಮಡಿ ಪುಲಿಕೇಶಿ’ (1967) ಚಿತ್ರದಲ್ಲಿ ಎಂ.ಎನ್‌.ಲಕ್ಷ್ಮೀದೇವಿ. ಚಾಲುಕ್ಯ ದೊರೆ ಎರಡನೇ ಪುಲಕೇಶಿ ಕಥಾನಕ. ಮುಖ್ಯಭೂಮಿಕೆಯಲ್ಲಿ ರಾಜಕುಮಾರ್, ಉದಯಕುಮಾರ್, ಜಯಂತಿ, ಕಲ್ಪನಾ ಅಭಿನಯಿಸಿದ್ದಾರೆ. ಜಿ.ವಿ.ಅಯ್ಯರ್ ಚಿತ್ರಕಥೆ, ಜಿ.ಕೆ.ವೆಂಕಟೇಶ್ ಸಂಗೀತ ಸಂಯೋಜನೆ, ಬಿ.ದೊರೈರಾಜ್ ಛಾಯಾಗ್ರಹಣವಿದೆ. ನಟ ಬಾಲಕೃಷ್ಣ ಅಭಿನಯದ ನೂರನೇ ಚಿತ್ರವಿದು. (ಫೋಟೊ ಕೃಪೆ: ವಿಕಾಸ್ ನೇಗಿಲೋಣಿ)

Share this post