ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬೆಟ್ಟದ ಹೂವು – ರಾಷ್ಟ್ರಪ್ರಶಸ್ತಿ

ಎನ್‌.ಲಕ್ಷ್ಮೀನಾರಾಯಣ ನಿರ್ದೇಶನದ ‘ಬೆಟ್ಟದ ಹೂವು’ (1985) ಸಿನಿಮಾ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ಮತ್ತು ಅತ್ಯುತ್ತಮ ಬಾಲನಟ ಎರಡು ರಾಷ್ಟ್ರಪ್ರಶಸ್ತಿಗಳಿಗೆ ಪಾತ್ರವಾಗಿದೆ. ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋದಾಗಿನ ಫೊಟೋ ಇದು. ಚಿತ್ರದ ನಿರ್ಮಾಪಕಿ ಪಾರ್ವತಮ್ಮ, ಮೊಮ್ಮಗನೊಂದಿಗೆ ವರನಟ ಡಾ.ರಾಜಕುಮಾರ್‌, ಪುನೀತ್‌ ಮತ್ತು ನಿರ್ದೇಶಕ ಎನ್‌.ಲಕ್ಷ್ಮೀನಾರಾಯಣ ಇದ್ದಾರೆ. ಬಾಲನಟನಾಗಿ ಬೆಳ್ಳಿತೆರೆಗೆ ಪರಿಚಯವಾದ ಪುನೀತ್‌ ಇಂದು ಕನ್ನಡದ ಜನಪ್ರಿಯ ನಾಯಕನಟ. ಅವರಿಂದು 46ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು