ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಉಸ್ತಾದ್ ಬಡೇ ಗುಲಾಮ್ ಅಲಿ ಖಾನ್ ಮತ್ತು ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್ ಫೋಟೋದಲ್ಲಿದ್ದಾರೆ. ಪಟಿಯಾಲಾ ಘರಾನಾ ಶೈಲಿಯ ಹಿಂದೂಸ್ತಾನಿ ಗಾಯಕ ಗುಲಾಮ್ ಅಲಿ ಖಾನ್ ಅವರು ಸಿನಿಮಾ ಗಾಯನದಿಂದ ದೂರವೇ ಇದ್ದವರು. ನಿರ್ದೇಶಕ ಕೆ.ಆಸಿಫ್ ಮತ್ತು ಸಂಗೀತ ಸಂಯೋಜಕ ನೌಶಾದ್ ಅವರ ಒತ್ತಾಯಕ್ಕೆ ಮಣಿದು ಹಿಂದಿ ಚಿತ್ರರಂಗದ ಮೈಲುಗಲ್ಲು ‘ಮೊಘಲ್ ಎ ಆಜಮ್’ (1960) ಚಿತ್ರದ ‘ಪ್ರೇಮ್ ಜೋಗನ್ ಬನ್ ಕೆ’ ಮತ್ತು ‘ಶುಭ್ ದಿನ್ ಆಯೋ’ ಗೀತೆಗಳನ್ನು ಹಾಡಿದ್ದರು. ಇಂದು ಗುಲಾಮ್ ಅಲಿ ಖಾನ್ (02/04/1902 – 25/04/1968) ಅವರ ಜನ್ಮದಿನ. (ಫೋಟೊ ಕೃಪೆ: ಸ್ವಾತಿ ಮೋರ್)

ಉಸ್ತಾದ್ ಬಡೇ ಗುಲಾಮ್ ಅಲಿ ಖಾನ್
- ಹಿಂದಿ ಸಿನಿಮಾ
Share this post