ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ‘ಬಾಲನ್ ದಿ ಬಾಯ್’ ಮಲಯಾಳಂ ಸಿನಿಮಾ ಕಾನ್ಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಚಿದಂಬರಂ ನಿರ್ದೇಶನದ ಚಿತ್ರವಿದು.
ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದು ಕೆವಿಎನ್. ಈ ಪ್ರೊಡಕ್ಷನ್ ಸೃಷ್ಟಿಕರ್ತ ವೆಂಕಟ್ ಕೆ ನಾರಾಯಣ್ ನೂರಾರು ಕೋಟಿ ಸುರಿದು ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಸದ್ಯ ಕೆವಿಎನ್ ನಿರ್ಮಿಸಿರುವ ಕೆಡಿ ಚಿತ್ರ ಸೂಪರ್ ಹಿಟ್ ಆಗಿದೆ. ಇದೀಗ ಈ ಖುಷಿ ನಡುವೆ ಕೆವಿಎನ್ ಸಂಸ್ಥೆ ಮತ್ತೊಂದು ಮಹತ್ತರ ಹೆಜ್ಜೆಯೊಂದನ್ನು ಇಟ್ಟಿದೆ. ಕೆವಿಎನ್ ಕನ್ನಡ, ತೆಲುವು ಹಾಗೂ ತಮಿಳು ಚಿತ್ರಗಳನ್ನು ನಿರ್ಮಿಸುತ್ತಿದೆ. ಜೊತೆಗೆ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದೆ. ಈ ಸಂಸ್ಥೆ ‘ಬಾಲನ್ ದಿ ಬಾಯ್’ ಎಂಬ ಮಲಯಾಳಂ ಸಿನಿಮಾಗೆ ಹಣ ಹಾಕಿದೆ. ಈ ಚಿತ್ರವನ್ನು ಇದೀಗ ವಿಶ್ವ ವೇದಿಕೆಗೆ ಕೊಂಡೊಯ್ಯುತ್ತಿದೆ.
ಕೆವಿಎನ್ ನಡಿ ನಿರ್ಮಾಣಗೊಂಡಿರುವ ‘ಬಾಲನ್ ದಿ ಬಾಯ್ಸ್’ ಚಿತ್ರ ಕಾನ್ಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಇದೇ ತಿಂಗಳ 14ರಂದು ನಡೆಯುವ ಕಾನ್ಸ್ ಚಲನಚಿತ್ರೋತ್ಸವದಲ್ಲಿ ದೇಶ ವಿದೇಶಗಳ ಕಲಾವಿದರು ಭಾಗವಹಿಸಲಿದ್ದಾರೆ. ಈ ಸಿನಿಮೋತ್ಸವದಲ್ಲಿ ಕೆವಿಎನ್ ಹಣ ಹಾಕಿರುವ ‘ಬಾಲನ್ ದಿ ಬಾಯ್’ ಪ್ರದರ್ಶನಗೊಳ್ಳಲಿದೆ. ಈ ಹಿಂದೆ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರ ನಿರ್ದೇಶನ ಮಾಡಿದ್ದ ಚಿದಂಬರಂ ‘ಬಾಲನ್ ದಿ ಬಾಯ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.







