ಬಿಮಲ್ ರಾಯ್ ನಿರ್ದೇಶನದ ‘ಮಧುಮತಿ’ (1958) ಹಿಂದಿ ಚಿತ್ರದಲ್ಲಿ ದಿಲೀಪ್ ಕುಮಾರ್, ವೈಜಯಂತಿಮಾಲಾ. ಹಿಂದಿ ಚಿತ್ರರಂಗದ 50, 60ರ ದಶಕಗಳ ಜನಪ್ರಿಯ ನಾಯಕನಟಿ ವೈಜಯಂತಿಮಾಲಾ. ತಮಿಳುನಾಡು ಮೂಲದ ನಟಿ ಮೂಲತಃ ಶಾಸ್ತ್ರೀಯ ನೃತ್ಯಗಾರ್ತಿ. ಹದಿನಾರರ ಹರೆಯದಲ್ಲಿ ‘ವಾಝಕೈ’ (1949) ತಮಿಳು ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದರು. ಈ ಚಿತ್ರದ ಹಿಂದಿ ಅವತರಣಿಕೆ ‘ಬಹಾರ್’ನೊಂದಿಗೆ (1951) ಬಾಲಿವುಡ್ ಪ್ರವೇಶಿಸಿದ ಅವರು ಅತಿ ಕಡಿಮೆ ಅವಧಿಯಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡರು. ಪದ್ಮಶ್ರೀ ಪುರಸ್ಕೃತ ನಟಿ ಇಂದು (ಆಗಸ್ಟ್ 13) 85ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ವೈಜಯಂತಿಮಾಲಾ – 85
- ಹಿಂದಿ ಸಿನಿಮಾ
Share this post