ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಗಾಜನೂರಿನ ಮಗ

ಇದು ಅವರವತ್ತರ ದಶಕದ ಮಧ್ಯಭಾಗದಲ್ಲಿ ಸೆರೆಹಿಡಿದ ಫೋಟೋ. ವರನಟ ಡಾ.ರಾಜಕುಮಾರ್ ತಮ್ಮೂರು ಗಾಜನೂರಿನಲ್ಲಿದ್ದಾಗ ಕ್ಲಿಕ್ಕಿಸಿದ ಚಿತ್ರ. ಅವರ ಕಂಕುಳಿನಲ್ಲಿರೋದು ಶಿವರಾಜಕುಮಾರ್‌. ಆ ವೇಳೆಗಾಗಲೇ ದೊಡ್ಡ ನಟನಾಗಿ ಜನಪ್ರಿಯರಾಗಿದ್ದ ರಾಜ್‌, ಊರಿನಲ್ಲಿ ಗ್ರಾಮಸ್ಥರೊಂದಿಗೆ ಸರಳವಾಗಿ ಓಡಾಡಿಕೊಂಡಿರಲು ಇಷ್ಟಪಡುತ್ತಿದ್ದರು. ಮಧ್ಯದಲ್ಲಿರುವ ಹಿರಿಯರು ಮೇಕಪ್‌ ಕಲಾವಿದ ಎಂ.ಎಸ್‌.ಸುಬ್ಬಣ್ಣ. ರಂಗಭೂಮಿ ಹಿನ್ನೆಲೆಯ ನಟ – ಮೇಕಪ್ ಕಲಾವಿದ ಸುಬ್ಬಣ್ಣನವರನ್ನು ನಟ ರಾಜಕುಮಾರ್ ತಂದೆಯ ಸ್ಥಾನದಲ್ಲಿ ನೋಡುತ್ತಿದ್ದರು. (ಫೋಟೊ – ಮಾಹಿತಿ ಕೃಪೆ: ಮೇಕಪ್ ಕಲಾವಿದ ಎಂ.ಎಸ್.ಕೇಶವ)

Share this post