ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಿನಿಮಾ ಪ್ರಚಾರ ವಿನ್ಯಾಸಕಾರ ಈಶ್ವರ್

ತಮ್ಮ ಗುರು, ಖ್ಯಾತ ಸಿನಿಮಾ ಪ್ರಚಾರ ವಿನ್ಯಾಸಕಾರ ಕೇತಾ ಅವರೊಂದಿಗೆ ಈಶ್ವರ್‌. ಹಿಂದಿ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಸಿನಿಮಾ ಪ್ರಚಾರ ವಿನ್ಯಾಸಕಾರ ಈಶ್ವರ್‌ (84 ವರ್ಷ) ಅವರು ಇಂದು (ಸೆಪ್ಟೆಂಬರ್‌ 21) ಚೆನ್ನೈನಲ್ಲಿ ಅಗಲಿದ್ದಾರೆ. ಆಂಧ್ರ ಮೂಲದ ಈಶ್ವರ್‌ ಅಂದಿನ ಜನಪ್ರಿಯ ಸಿನಿಮಾ ಪ್ರಚಾರ ವಿನ್ಯಾಸಕಾರರಾದ ಕೇತಾ ಅವರಲ್ಲಿ ಸಹಾಯಕರಾಗಿ ವೃತ್ತಿ ಬದುಕು ಆರಂಭಿಸಿದರು. ‘ಸಾಕ್ಷಿ’ (1967) ತೆಲುಗು ಚಿತ್ರದೊಂದಿಗೆ ಸ್ವತಂತ್ರ್ಯ ಪ್ರಚಾರ ವಿನ್ಯಾಸಕಾರರಾಗಿ ಗುರುತಿಸಿಕೊಂಡ ಈಶ್ವರ್‌ ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳ 2,600ಕ್ಕೂ ಹೆಚ್ಚು ಚಿತ್ರಗಳಿಗೆ ಪ್ರಚಾರ ವಿನ್ಯಾಸಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ರಚಿಸಿದ ‘ಸಿನಿಮಾ ಪೋಸ್ಟರ್‌’ ಪುಸ್ತಕಕ್ಕೆ ನಂದಿ ಪುರಸ್ಕಾರ (2011) ಲಭಿಸಿದೆ. ಸಿನಿಮಾ ಕ್ಷೇತ್ರಕ್ಕೆ ಈಶ್ವರ್‌ ಅವರ ಸೇವೆ ಪರಿಗಣಿಸಿ ಆಂಧ್ರಪ್ರದೇಶ ಸರ್ಕಾರ 2015ರಲ್ಲಿ ಪ್ರತಿಷ್ಠಿತ ರಘುಪತಿ ವೆಂಕಯ್ಯ ಪುರಸ್ಕಾರ ನೀಡಿ ಗೌರವಿಸಿದೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು