ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ | ಅತ್ಯುತ್ತಮ ನಟ ರಿಷಬ್, ಅತ್ಯುತ್ತಮ ನಟಿ ಆಶಿಕಾ

ಪೋಸ್ಟ್ ಶೇರ್ ಮಾಡಿ
ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ | ಅತ್ಯುತ್ತಮ ನಟ ರಿಷಬ್, ಅತ್ಯುತ್ತಮ ನಟಿ ಆಶಿಕಾ

ಬೆಂಗಳೂರಿನ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ನಿನ್ನೆ (ಮಾರ್ಚ್‌ 29) ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ 7ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿತು. 2025ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಆಯ್ದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಅಕಾಡೆಮಿಯ 7ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು. 2025ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಆಯ್ದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ನಟ ಪ್ರಶಸ್ತಿಯು ‘ಕಾಂತಾರ ಅಧ್ಯಾಯ1’ ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಪಾಲಾದರೆ, ಅತ್ಯುತ್ತಮ ನಟಿ ಪ್ರಶಸ್ತಿಯು ‘ಗತವೈಭವ’ ಚಿತ್ರದ ನಟನೆಗಾಗಿ ಆಶಿಕಾ ರಂಗನಾಥ್ ಪಡೆದರು. 2025ನೇ ಸಾಲಿನ ಅತ್ಯುತ್ತಮ ಸಿನಿಮಾ ಪ್ರಶಸ್ತಿ ‘ಕಾಂತಾರ ಅಧ್ಯಾಯ 1’ರ ಪಾಲಾಯಿತು. ‘ಕಾಂತಾರ’ ಸಿನಿಮಾ ಒಟ್ಟು ಒಂಬತ್ತು ವಿಭಾಗಗಳಲ್ಲಿ ಪ್ರಶಸ್ತಿ ಪಡೆಯಿತು. ಜೊತೆಗೆ ಕನ್ನಡದ ಟಾಕಿ ಚಿತ್ರಗಳ ಪ್ರಥಮ ನಾಯಕ ಸುಬ್ಬಯ್ಯ ನಾಯ್ಡು ಅವರ ಮರಿಮೊಮ್ಮಗ ಸುಕೃತ್‌ ಸೃಜನ್ ಲೋಕೇಶ್ ಅವರಿಗೆ ವಿಶೇಷ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೀವಮಾನ ಸಾಧನೆಯ ಗೌರವವನ್ನು ಹಿರಿಯ ನಿರ್ದೇಶಕ ರಾಜೇಂದ್ರ್ ಸಿಂಗ್ ಬಾಬು ಅವರಿಗೆ ನೀಡಲಾಯಿತು.

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಈ ಅದ್ಧೂರಿ ಹಾಗೂ ವರ್ಣರಂಜಿತ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧ್, ಹೆಸರಾಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಖ್ಯಾತ ನಿರ್ದೇಶಕ ಬಿ.ಸುರೇಶ್, ಹಿರಿಯ ನಟಿ ಗಿರಿಜಾ ಲೋಕೇಶ್, ಖ್ಯಾತ ನಟಿ ಪೂಜಾ ಗಾಂಧಿ, ನಟಿ ಹಾಗೂ ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ, ಖ್ಯಾತ ನಟ ಮಾಸ್ಟರ್ ಮಂಜುನಾಥ್ ಟೈಟಲ್ ಸ್ಪಾನ್ಸರ್ ಅಂಬರ್ಸ್ಟೋನ್ ಪ್ರಾಪರ್ಟೀಸ್ ಮ್ಯಾನೇಜಿಂಗ್ ಡೈರೆಕ್ಟರ್ ಯಶ್ವಂತ್ ಕುಮಾರ್, ಕಿರಣ್ ಕುಮಾರ್, ಕೀರ್ತಿ, ಅಶ್ವಸೂರ್ಯ ರಿಯಾಲಿಟಿಸ್ ಡೈರೆಕ್ಟರ್ ಎಸ್ ರಂಜಿತ್ ಕುಮಾರ್ ಅಲೈನ್ಸ್ ಯೂನಿವರ್ಸಿಟಿಯ ರೆಜಿಸ್ಟರ್ ಸುರೇಖಾ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು. ಟೈಟಲ್ ಸ್ಪಾನ್ಸರ್ ಆಗಿ ಅಂಬರ್ಸ್ಟೋನ್ ಪ್ರಾಪರ್ಟೀಸ್ ಹಾಗೂ ಕೋ ಸ್ಪಾನ್ಸರ್ ಆಗಿ ಅಶ್ವಸೂರ್ಯ ರಿಯಾಲಿಟಿಸ್ ಪ್ರಶಸ್ತಿ ಸಮಾರಂಭಕ್ಕೆ ಜೊತೆಯಾಗಿತ್ತು.

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ 2025ನೇ ಸಾಲಿನ ಪ್ರಶಸ್ತಿ ವಿಜೇತರು :

  1. ಅತ್ಯುತ್ತಮ ಚೊಚ್ಚಲ ನಿರ್ಮಾಪಕ: ನಿವೇದಿತಾ ಶಿವರಾಜ್ ಕುಮಾರ್ (ಫೈರ್ ಪ್ಲೈ)
  2. ಅತ್ಯುತ್ತಮ ಚೊಚ್ಚಲ ಬರಹಗಾರ: ಸುಮಂತ್ ಭಟ್ ( ಮಿಥ್ಯ)
  3. ಅತ್ಯುತ್ತಮ ಚೊಚ್ಚಲ ಸಿನಿಮಾ ನಿರ್ದೇಶನ : ಭೀಮರಾವ್ ಪಿ (ಹೆಬ್ಬುಲಿ ಕಟ್)’
  4. ಅತ್ಯುತ್ತಮ ಚೊಚ್ಚಲ ನಟಿ: ಪ್ರಿಯಾಂಕಾ ಆಚಾರ್ಯ ( ಏಳುಮಲೆ)
  5. ಅತ್ಯುತ್ತಮ ಚೊಚ್ಚಲ ನಟ: ಕಿರೀಟಿ (ಜ್ಯೂನಿಯರ್) ಹಾಗೂ ದುಷ್ಯಂತ್ (ಗತ ವೈಭವ)
  6. ಅತ್ಯುತ್ತಮ ಬಾಲ ನಟ: ಅತೀಶ್ ಶೆಟ್ಟಿ (ಮಿಥ್ಯ)
  7. ಅತ್ಯುತ್ತಮ ವಿಎಫೆಕ್ಸ್: ಕೆ.ವಿ. ಸಂಜಿತ್ (ಕಾಂತಾರ ಚಾಪ್ಟರ್ 1)
  8. ಅತ್ಯುತ್ತಮ ಕಲಾ ನಿರ್ದೇಶನ : ಬೆಂಗಲನ್ ಮತ್ತು ಧರಣಿ ಗಂಗಾಪುತ್ರ (ಕಾಂತಾರ ಚಾಪ್ಟರ್ 1)
  9. ಅತ್ಯುತ್ತಮ ಸಾಹಸ ನಿರ್ದೇಶನ: ಅರ್ಜುನ್ ರಾಜ್ ( ಕಾಂತಾರ ಚಾಪ್ಟರ್ 1)
  10. ಅತ್ಯುತ್ತಮ ಸಂಕಲನ: ಕೆ.ಎಂ ಪ್ರಕಾಶ್ (ಏಳುಮಲೆ)
  11. ಅತ್ಯುತ್ತಮ ಸಂಭಾಷಣೆ: ಜೆ.ಪಿ ತುಮಿನಾಡು (ಸು ಫ್ರಂ ಸೋ)
  12. ಅತ್ಯುತ್ತಮ ಸಿನಿಮಾಟೋಗ್ರಫಿ: ಅರವಿಂದ್ ಕಶ್ಯಪ್ (ಕಾಂತಾರ ಚಾಪ್ಟರ್ 1)
  13. ಅತ್ಯುತ್ತಮ ನೃತ್ಯ ನಿರ್ದೇಶನ: ವಿನಾಯಕ ಆಚಾರ್ಯ ( ಸು ಫ್ರಂ ಸೋ)
  14. ಅತ್ಯುತ್ತಮ ಗಾಯಕ: ಅಬ್ಬಿ ವಿ (ಕಾಂತಾರ ಚಾಪ್ಟರ್ 1)
  15. ಅತ್ಯುತ್ತಮ ಗಾಯಕಿ: ಸಾನ್ವಿ ಸುದೀಪ್ ( ಮಾರ್ಕ್)
  16. ಅತ್ಯುತ್ತಮ ಚಿತ್ರ ಸಾಹಿತ್ಯ: ಸಿಂಪಲ್ ಸುನಿ (ಗತ ವೈಭವ)
  17. ಅತ್ಯುತ್ತಮ ಹಿನ್ನೆಲೆ ಸಂಗೀತ: ಸಂದೀಪ್ ತುಳಸಿದಾಸ್ ( ಸು ಫ್ರಂ ಸೋ)
  18. ಅತ್ಯುತ್ತಮ ಸಂಗೀತ: ಅಜನೀಶ್ ಲೋಕನಾಥ್ (ಕಾಂತಾರ ಚಾಪ್ಟರ್ 1)
  19. ಅತ್ಯುತ್ತಮ ಚಿತ್ರಕಥೆ: ಪುನೀತ್ ರಂಗಸ್ವಾಮಿ ( ಏಳು ಮಲೆ)
  20. ಅತ್ಯುತ್ತಮ ಸಹ ನಟಿ: ಸಂಧ್ಯಾ ಅರಕೆರೆ ( ಸು ಫ್ರಂ ಸೋ)
  21. ಅತ್ಯುತ್ತಮ ಸಹ ನಟ: ಮಹಾಂತೇಶ್ ಹಿರೇಮಠ (ಹೆಬ್ಬುಲಿ ಕಟ್)
  22. ಅತ್ಯುತ್ತಮ ನಿರ್ದೇಶಕ: ರಿಷಬ್ ಶೆಟ್ಟಿ (ಕಾಂತಾರ ಚಾಪ್ಟರ್ 1)
  23. ಅತ್ಯುತ್ತಮ ನಟಿ : ಆಶಿಕಾ ರಂಗನಾಥ್ ( ಗತ ವೈಭವ)
  24. ಅತ್ಯುತ್ತಮ ನಟ : ರಿಷಬ್ ಶೆಟ್ಟಿ (ಕಾಂತಾರ ಚಾಪ್ಟರ್ 1)
  25. ಅತ್ಯುತ್ತಮ ಚಿತ್ರ: ಕಾಂತಾರ ಚಾಪ್ಟರ್ 1
  26. ಜೀವಮಾನ ಸಾಧನೆ ಪ್ರಶಸ್ತಿ: ಎಸ್.ವಿ.ರಾಜೇಂದ್ರ ಸಿಂಗ್ ಬಾಬು

ಈ ಬರಹಗಳನ್ನೂ ಓದಿ