ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ದೂರದ ಬೆಟ್ಟ

ಬೆಂಗಳೂರು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ‘ದೂರದ ಬೆಟ್ಟ’ (1973) ಸಿನಿಮಾ ಚಿತ್ರೀಕರಣದ ಸಂದರ್ಭ. ನಿರ್ದೇಶಕ ಸಿದ್ದಲಿಂಗಯ್ಯ, ಸಹಾಯಕ ನಿರ್ದೇಶಕ ಭಾರ್ಗವ, ಛಾಯಾಗ್ರಾಹಕ ಡಿ.ವಿ.ರಾಜಾರಾಂ, ನಟ ರಾಜಕುಮಾರ್‌  ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ. ವಿಕ್ರಂ ಶ್ರೀನಿವಾಸ್ ನಿರ್ಮಾಣದ ಈ ಚಿತ್ರಕ್ಕೆ ಚಿ.ಉದಯಶಂಕರ್ ಗೀತರಚನೆ, ಜಿ.ಕೆ.ವೆಂಕಟೇಶ್‌ ಸಂಗೀತ ಸಂಯೋಜನೆ, ಎನ್‌.ಸಿ.ರಾಜನ್ ಸಂಕಲನವಿದೆ. ಚಿತ್ರದಲ್ಲಿನ ‘ಸವಾಲು ಹಾಕಿ ಸೋಲಿಸಿ ಎಲ್ಲರ’ ಗೀತೆಯನ್ನು ಖ್ಯಾತ ಹಿಂದಿ ಗಾಯಕಿ ಆಶಾ ಬೋಂಸ್ಲೆ ಹಾಡಿದ್ದಾರೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post